ವಾಣಿಜ್ಯ

ಕೋವಿಡ್-19ನಿಂದ ಆರ್ಥಿಕ ಕುಸಿತ: ರಫ್ತಿಗೆ ಸಂಬಂಧಿಸಿ ನಿಯಮ ವಿಸ್ತರಿಸಿದ ಆರ್ ಬಿಐ

Sumana Upadhyaya

ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಅದರಂತೆ ರಫ್ತು ವಸ್ತುಗಳ ಮೇಲಿನ ನೀತಿ, ನಿರ್ಬಂಧಗಳ ಅವಧಿಯನ್ನು ವಿಸ್ತರಿಸಲಾಗಿದೆ.

ಅದರ ಜೊತೆಗೆ ಪ್ರಸ್ತುತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿರುವ ಪರಿಹಾರ ಮತ್ತು ವಿಧಾನ(ways and means advances)ಗಳ ಮಿತಿಯನ್ನು ಶೇಕಡಾ 30ರಷ್ಟು ಹೆಚ್ಚಿಸಿದೆ.

ಈ ಕುರಿತು ಹೇಳಿಕೆ ಹೊರಡಿಸಿರುವ ಆರ್ ಬಿಐ, ಪ್ರಸ್ತುತ ರಫ್ತುದಾರರು ಮಾಡಿರುವ ಸಾಫ್ಟ್ ವೇರ್ ರಫ್ತು ಅಥವಾ ವಸ್ತುಗಳ ಮೌಲ್ಯಗಳಿಗೆ ಸೂಕ್ತ ನಿಯಮ ರೂಪಿಸಿ ದೇಶಕ್ಕೆ 9 ತಿಂಗಳೊಳಗೆ ರಫ್ತು ಮಾಡಿದ ದಿನದಿಂದ ಕಳುಹಿಸಬೇಕು. ಆದರೆ ಕೊರೋನಾ ವೈರಸ್ ನಿಂದ ವಹಿವಾಟುಗಳೆಲ್ಲ ಸ್ಥಗಿತಗೊಂಡಿರುವುದರಿಂದ 15 ತಿಂಗಳವರೆಗೆ ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದಿದೆ.

SCROLL FOR NEXT