ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ! 

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ!
Srinivas Rao BV
Updated On : 16 Apr 2020, 5:24 pm

ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. 

ಮೊದಲ ಹಂತದ ಲಾಕ್ ಡೌನ್ ನಿಂದ ಮೇ.3 ವರೆಗೆ ಕಾಯ್ದಿರಿಸಲಾದ ಟಿಕೆಟ್ ಗಳಿಗೆ ಪ್ರಯಾಣಿಕರು ಕೇಳಿದಲ್ಲಿ, ರದ್ದತಿ ಶುಲ್ಕವಿಲ್ಲದೇ ಪೂರ್ಣ ಹಣವನ್ನು ವಾಪಸ್ ನೀಡಲಾಗುತ್ತದೆ. ಮಾ.25 ರಿಂದ ಏ.14 ಅವಧಿಗೆ ಟಿಕೆಟ್ ಬುಕ್ ಮಾಡಿದ್ದರೆ ಏರ್ಲೈನ್ಸ್ ನಿಂದ ಪೂರ್ತಿ ಹಣವನ್ನು ವಾಪಸ್ ನೀಡಲಾಗುತ್ತದೆ. ಟಿಕೆಟ್ ರದ್ದುಗೊಳಿಸಲು ಮನವಿ ಮಾಡಿದ ಮೂರು ವಾರಗಳಲ್ಲಿ ಮರುಪಾವತಿ ಖಾತೆಗೆ ಸೇರಲಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶಿಯ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಒಪ್ಪದೇ ಮುಂದಿನ ಬಾರಿಯ ವಿಮಾನ ಪ್ರಯಾಣದ ವೇಳೆ ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಸ್ಪಷ್ಟನೆ ನೀಡಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement