ವಾಣಿಜ್ಯ

ಚೀನಾಗೆ ಪಾರ್ಯಾಯವಾಗಿ ವಿದೇಶಿ ಕಂಪನಿಗಳಿಗೆ ಕರ್ನಾಟಕ ಗಾಳ! 

Srinivas Rao BV

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಪ್ರಪಂಚದಲ್ಲಿ ಬದಲಾದ ಸ್ಥಿತಿಗತಿಗಳಿಂದ ಲಾಭ ಪಡೆಯಲು ಕರ್ನಾಟಕ ಮುಂದಾಗಿದೆ. 

ಈಗ ಉಂಟಾಗಿರುವ ಪರಿಸ್ಥಿತಿಯಿಂದಾಗಿ ದೊಡ್ಡ ಕಂಪನಿಗಳು ಚೀನಾಗೆ ಪರ್ಯಾಯವನ್ನು ಹುಡುಕುತ್ತಿದ್ದು, ಇದರ ಲಾಭವನ್ನು ಕರ್ನಾಟಕ ಪಡೆಯಲು ಮುಂದಾಗಿದೆ.ಇದರ ಭಾಗವಾಗಿ ಈಗಾಗಲೇ ಕರ್ನಾಟಕ ಕೈಗಾರಿಕಾ ಇಲಾಖೆ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. "ಈಗಾಗಲೇ ಜಪಾನ್, ದಕ್ಷಿಣ ಕೊರಿಯಾ ಹಾಗೂ ಬೇರೆ ರಾಷ್ಟ್ರಗಳಿಂದ ನಮಗೆ ಒಂದಷ್ಟು ಹೂಡಿಕೆದಾರರು ಸಿಕ್ಕಿದ್ದಾರೆ. ಮಾತುಕತೆ ಸಕಾರಾತ್ಮಕವಾಗಿದೆ. ದೂರವಾಣಿ, ಇ-ಮೇಲ್, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಾಗುತ್ತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ. 

ಕೊರೋನೋತ್ತರವಾಗಿ ಹೂಡಿಕೆದಾರರನ್ನು ಸೆಳೆಯಲು ಎದುರಾಗಲಿರುವ ಪೈಪೋಟಿ ನೀಡಲು ಕರ್ನಾಟಕದಲ್ಲಿರುವ ಉತ್ತಮ ಕೈಗಾರಿಕಾ ವ್ಯವಸ್ಥೆ ನುರಿತ ನೌಕರರ ಲಭ್ಯತೆ ಎಲ್ಲವೂ ಸಹಕಾರಿಯಾಗಿರಲಿದೆ. ಆದರೆ ಭೂಸ್ವಾಧೀನ ಹಾಗೂ ಅನುಮತಿ ನೀಡುವಲ್ಲಿ ತ್ವರಿತ ಪ್ರಕ್ರಿಯೆಗಳು ಸವಾಲಿನ ಸಂಗತಿಯಾಗಲಿವೆ ಎಂದು ಗುಪ್ತಾ ತಿಳಿಸಿದ್ದಾರೆ. ಜಪಾನ್ ನ ಕಂಪನಿಗಳಿಗೆ ಈಗಾಗಲೇ 500 ಎಕರೆ ಜಪಾನ್ ಇಂಡಸ್ಟ್ರಿಯಲ್ ಟೌನ್ ಶಿಪ್ ಸಿದ್ಧವಾಗಿದೆ. ಕಳೆದ ಆರು ತಿಂಗಳಿನಿಂದ ಅದನ್ನು ಮಾರ್ಕೆಟಿಂಗ್ ಮಾಡಲು ಯತ್ನಿಸುತ್ತಿದ್ದೇವೆ. ಈ ನಡುವೆ ಕಾಂಪಿಟ್ ವಿತ್ ಚೀನಾ ಕ್ಲಸ್ಟರ್ ಗಳೂ ಇದೆ ಎನ್ನುತ್ತಾರೆ ಗೌರವ್ ಗುಪ್ತ. 

ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಮುಂದಿನ 2-3 ತಿಂಗಳುಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ನಂತರದ ದಿನಗಳಲ್ಲಿ ಅನುಕೂಲ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

SCROLL FOR NEXT