ಸಾಂದರ್ಭಿಕ ಚಿತ್ರ 
ವಾಣಿಜ್ಯ

ವ್ಯಾಪಾರ-ವಹಿವಾಟು ಅಲ್ಪ ಚೇತರಿಕೆ: ನವೆಂಬರ್ ನಲ್ಲಿ 1.04 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಕೊರೋನಾ ಸೋಂಕಿನ ಭೀತಿಯ ನಂತರ ಆನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಸಿಕೊಂಡಿದೆ.

ನವದೆಹಲಿ: ಕೊರೋನಾ ಸೋಂಕಿನ ಭೀತಿಯ ನಂತರ ಆನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಸಿಕೊಂಡಿದೆ. ಇದರಿಂದಾಗಿ ನವೆಂಬರ್ ಒಂದೇ ತಿಂಗಳಿನಲ್ಲಿ 1,04,963 ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹವಾಗಿರುವುದಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡ 1.42 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ.

ಇದರಲ್ಲಿ ಕೇಂದ್ರ ಜಿಎಸ್‌ಟಿ 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ (ಸರಕುಗಳ ಆಮದಿನಿಂದ ಸಂಗ್ರಹಿಸಿದ 22,078 ಕೋಟಿ ರೂ.ಸೇರಿದಂತೆ) ಮತ್ತು ಸೆಸ್, 8,242 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 9 809 ಕೋಟಿ ಸೇರಿದಂತೆ) ಗಳಾಗಿದೆ. 2020 ರ ನವೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 82 ಲಕ್ಷವಾಗಿದೆ.

ಕೇಂದ್ರ ಜಿಎಸ್‌ಟಿಗೆ 22,293 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 16,286 ಕೋಟಿ ರೂ.ಗಳನ್ನು ಐಜಿಎಸ್‌ಟಿಯಿಂದ ನಿಯಮಿತ ಇತ್ಯರ್ಥವಾಗಿ ಸರ್ಕಾರ ಇತ್ಯರ್ಥಪಡಿಸಿದೆ. 2020 ರ ನವೆಂಬರ್ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ ಜಿಎಸ್‌ಟಿಗೆ 41,482 ಕೋಟಿ ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 41,826 ಕೋಟಿ ರೂ. ಗಳಾಗಿದೆ.

ಜಿಎಸ್‌ಟಿ ಆದಾಯದಲ್ಲಿನ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020 ರ ನವೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕಿಂತ ಶೇ.1.4 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಬಂದ ಆದಾಯಕ್ಕೆ ಹೋಲಿಸಿದರೆ ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ. 4.9 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಶೇ. 0.5 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No Toll For Indian Tankers': ಅಮೆರಿಕ ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ!

ರಾಮ ಮಂದಿರದಲ್ಲಿ 'ಸಾಂಕೇತಿಕ ಜ್ಯೋತಿ' ಹಿಂದೂ ಸಂಪ್ರದಾಯಕ್ಕೆ ವಿರುದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ್ ಆಕ್ಷೇಪ

Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

SCROLL FOR NEXT