'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವು ನಿರಂತರ ದಾಳಿಗಳಿಂದ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
Donald Trump Warns Iranians' Call For His Assassination
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ಬಹಿರಂಗವಾಗಿ ಕರೆ ನೀಡಿದ ಘಟನೆ ಬೆನ್ನಲ್ಲೇ ಧಮ್ ಇದ್ರೆ ನನ್ನ ಕೊಲ್ಲಿ ಎಂದು ಟ್ರಂಪ್ ಇರಾನ್ ಗೆ ಬಹಿರಂಗ ಸವಾಲೆಸೆದಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವು ನಿರಂತರ ದಾಳಿಗಳಿಂದ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಪ್ರಬಲ ಎಚ್ಚರಿಕೆ ನೀಡಿದ್ದು, ತಮ್ಮ ಮೇಲೆ ದಾಳಿಯಾದರೆ ಇರಾನ್ ಛಿದ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ತಮ್ಮ Truth Social ಸಾಮಾಜಿಕ ಜಾಲತಾಣದಲ್ಲಿ ಈ ಎಚ್ಚರಿಕೆ ನೀಡಿದ್ದು, 'ಧೈರ್ಯ ಇದ್ದರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ನಿಮ್ಮತ್ತ ತಿರುಗಿ ಲೋಡ್ ಆಗಿ ಉಡಾವಣೆಗೆ ಸರ್ವಸನ್ನದ್ಧವಾಗಿ ನಿಂತಿದೆ ಎಂದು ಎಚ್ಚರಿಸಿದ್ದಾರೆ.

Donald Trump Warns Iranians' Call For His Assassination
ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಸಾವಿರ ಕ್ಷಿಪಣಿ, ಇರಾನ್ ಛಿದ್ರ

"ಇರಾನ್ ಸರ್ಕಾರ ತನ್ನ ಬೆದರಿಕೆಯನ್ನು ಕಾರ್ಯರೂಪಕ್ಕೆ ತಂದರೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮೇಲೆ ದಾಳಿ ಮಾಡಲು 1,000 ಕ್ಷಿಪಣಿಗಳು ಗುರಿ ಹಿಡಿದು ಸಜ್ಜಾಗಿವೆ. ಅವುಗಳ ಬಳಿಕ ಸಾವಿರಾರು ಕ್ಷಿಪಣಿಗಳು ತಕ್ಷಣವೇ ಹಾರಾಟ ಆರಂಭಿಸಲಿವೆ" ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಮ್ಮನ್ನು ಹತ್ಯೆ ಮಾಡುವ ಅಥವಾ ಹತ್ಯೆಗೆ ಯತ್ನಿಸುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. "ಅಮೆರಿಕ ಸೇನೆ ಇರಾನ್‌ನ ಎಲ್ಲ ಪ್ರದೇಶಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ" ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಮತ್ತಷ್ಟು ಎಚ್ಚರಿಕೆ ನೀಡಿದ್ದಾರೆ.

ಅಂದಹಾಗೆ ಫೆಬ್ರವರಿ 28ರಂದು ಆರಂಭವಾದ ಇರಾನ್ ಯುದ್ಧದ ಮೊದಲ ಹಂತದಲ್ಲೇ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ಮಾಜಿ ಸರ್ವೋಚ್ಛ ನಾಯಕ 86 ವರ್ಷದ ಖಮೇನಿ ಮೃತಪಟ್ಟಿದ್ದರು. ಹಲವು ದಿನಗಳ ಅಂತ್ಯಕ್ರಿಯೆಯ ಬಳಿಕ ಈ ವಾರ ಇರಾನ್ ಹಾಗೂ ಇರಾಕ್‌ನ ವಿವಿಧ ನಗರಗಳಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಖಮೇನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅನೇಕರು ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡುವಂತೆ ಕರೆ ನೀಡುವ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com