ವಾಣಿಜ್ಯ

ಕೆಲವೇ ದಿನಗಳಲ್ಲಿ ಆರ್‌ಟಿಜಿಎಸ್ ವ್ಯವಸ್ಥೆ ದಿನದ 24 ತಾಸು ಲಭ್ಯ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Vishwanath S

ಮುಂಬೈ: ದೊಡ್ಡ ಮೊತ್ತದ ವಹಿವಾಟಿಗೆ ಬಳಸಲಾಗುವ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್(ಆರ್‌ಟಿಜಿಎಸ್) ವ್ಯವಸ್ಥೆ ಮುಂದಿನ ಕೆಲವೇ ದಿನಗಳಲ್ಲಿ ದಿನದ 24 ತಾಸು ಲಭ್ಯವಿರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್‍ ಶುಕ್ರವಾರ ಹೇಳಿದ್ದಾರೆ.

ಈ ವ್ಯವಸ್ಥೆ ಸಕ್ರಿಯಗೊಳಿಸುವಿಕೆಯೊಂದಿಗೆ ಹಿಂದಿನ ಐದು ದಿನಗಳ ಹಿಂದಿನ ಬದಲಾಗಿ ವಾರದ ಎಲ್ಲಾ ದಿನಗಳಲ್ಲಿ ಎಇಪಿಎಸ್, ಐಎಂಪಿಎಸ್, ಎನ್‌ಇಟಿಸಿ, ಎನ್‌ಎಫ್‌ಎಸ್, ರುಪೇ, ಯುಪಿಐ ವಹಿವಾಟುಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ. ಇದು ಪಾವತಿ ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ, ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಆರ್‌ಟಿಜಿಎಸ್ ವ್ಯವಸ್ಥೆ ಗ್ರಾಹಕರಿಗೆ ಲಭ್ಯವಿದೆ.

ಆರ್‌ಟಿಜಿಎಸ್ ಅನ್ನು ದೊಡ್ಡ ಮೊತ್ತವನ್ನು ತತ್‍ ಕ್ಷಣ ವರ್ಗಾವಣೆ ಮಾಡಲು ಬಳಸಲಾಗುತ್ತಿದೆ. ಎನ್‌ಇಎಫ್‌ಟಿಯನ್ನು 2 ಲಕ್ಷ ರೂ.ಗಳವರೆಗೆ ಹಣ ವರ್ಗಾವಣೆಗೆ ಬಳಸಲಾಗುತ್ತದೆ.

SCROLL FOR NEXT