ವಾಣಿಜ್ಯ

ಭಾರತದಲ್ಲಿ 2021 ರ ದ್ವಿತೀಯಾರ್ಧದಲ್ಲಿ ಜಿಯೋ 5 ಜಿ ಸೇವೆ ಪ್ರಾರಂಭ: ಮುಕೇಶ್ ಅಂಬಾನಿ 

Sumana Upadhyaya

ಮುಂಬೈ: 2021ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಜಿಯೊ 5ಜಿ ಸೇವೆ ಆರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020 ಭಾಷಣದಲ್ಲಿ ಇಂದು ಮಾತನಾಡಿದ ಅವರು, ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಜಿಯೊದ 5ಜಿ ಸೇವೆ ಒಂದು ಪುರಾವೆಯಾಗಲಿದೆ. ಮುಂದಿನ ವರ್ಷ ದೇಶದಲ್ಲಿ ಜಿಯೊ 5ಜಿ ಸೇವೆಯನ್ನು ತರುವುದು ಮಾತ್ರವಲ್ಲದೆ ಗೂಗಲ್ ಜೊತೆ ಸೇರಿಕೊಂಡು ಸಾಮಾನ್ಯ ಜನತೆಗೆ ಅಂಡ್ರಾಯ್ಡ್ ಫೋನ್ ಕೈಗೆಟಕುವ ದರದಲ್ಲಿ ಸಿಗುವಂತೆ ಅಭಿವೃದ್ಧಿಪಡಿಸಲಿದ್ದು, ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಭಾರತದಲ್ಲಿ ಆದಷ್ಟು ಶೀಘ್ರವೇ 5ಜಿ ಸೇವೆ ಆರಂಭಿಸಲು ಕೇಂದ್ರ ಸರ್ಕಾರದಿಂದ ಕ್ರಮಗಳ ಅಗತ್ಯವಿದೆ. ಭಾರತದಲ್ಲಿ 5ಜಿ ಕ್ರಾಂತಿಯನ್ನುಂಟುಮಾಡುವಲ್ಲಿ ಜಿಯೊ 5ಜಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಾನು ನಂಬುತ್ತೇನೆ. ಅದನ್ನು ದೇಶೀಯ ಅಭಿವೃದ್ಧಿತ ನೆಟ್ ವರ್ಕ್, ಹಾರ್ಡ್ ವೇರ್ ಮತ್ತು ತಂತ್ರಜ್ಞಾನ ಸಾಧನಗಳು ನಿಭಾಯಿಸಲಿವೆ ಎಂದು ಮುಕೇಶ್ ಅಂಬಾನಿ ಹೇಳಿದರು.

SCROLL FOR NEXT