ವಾಣಿಜ್ಯ

ಹೆಚ್ಚಿನ ನಿವೃತ್ತಿ ಭತ್ಯೆ, ಟೇಕ್ ಹೋಮ್ ವೇತನಕ್ಕೆ ಕತ್ತರಿ! ಹೊಸ ವೇತನ ನಿಯಮಗಳ ಬಗ್ಗೆ ಇಲ್ಲಿದೆ ವಿವರ...

ಏಪ್ರಿಲ್ 2021 ರಿಂದ ನಿವೃತ್ತಿಗಾಗಿನ ಆದಾಯ ಮತ್ತು ಗ್ರ್ಯಾಚುಟಿ ಪಾವತಿಯೊಂದಿಗೆ ನಿಮ್ಮ ಸಾಮಾಜಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ, ಆದರೆ ನಿಮ್ಮ ಮಾಸಿಕ ಟೇಕ್-ಹೋಮ್ ವೇತನ ಕಡಿಮೆಯಾಗಬಹುದು.

ನವದೆಹಲಿ: ಏಪ್ರಿಲ್ 2021 ರಿಂದ ನಿವೃತ್ತಿಗಾಗಿನ ಆದಾಯ ಮತ್ತು ಗ್ರ್ಯಾಚುಟಿ ಪಾವತಿಯೊಂದಿಗೆ ನಿಮ್ಮ ಸಾಮಾಜಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ, ಆದರೆ ನಿಮ್ಮ ಮಾಸಿಕ ಟೇಕ್-ಹೋಮ್ ವೇತನ ಕಡಿಮೆಯಾಗಬಹುದು.

ಮುಂದಿನ ಹಣಕಾಸು ವರ್ಷದಿಂದ ಪ್ರಾರಂಭವಾಗುವ ಕೇಂದ್ರದ ಪ್ರಸ್ತಾವಿತ ನಿಯಮಗಳ ಪ್ರಕಾರ, ವೇತನ ಪ್ಯಾಕೇಜ್‌ನಲ್ಲಿನ ಭತ್ಯೆ ಪ್ರಮಾಣವು ಒಟ್ಟು ವೇತನದ 50% ಕ್ಕಿಂತ ಹೆಚ್ಚಿರಬಾರದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೂಲ ವೇತನವು ಒಟ್ಟು ವೇತನದ ಕನಿಷ್ಠ 50% ಆಗಿರಬೇಕು. ಆದ್ದರಿಂದ, ಭವಿಷ್ಯನಿಧಿ (ಪಿಎಫ್) ಗೆ ನೌಕರರ ಕೊಡುಗೆ ಹೆಚ್ಚಲಿದೆ. ಇದರ ಪರಿಣಾಮವಾಗಿ ಟೇಕ್-ಹೋಮ್ ವೇತನ ಕಡಿಮೆಯಾಗುತ್ತದೆ. ಆದಾಗ್ಯೂ, ಇದು ಉದ್ಯೋಗಿಗಳು ನಿವೃತ್ತರಾದಾಗ ಹೆಚ್ಚಿನ ಗ್ರ್ಯಾಚುಟಿ ಪಾವತಿ ಮತ್ತು ಪಿಎಫ್ ಹಣ ಪಡೆಯಲು ಅವಕಾಶ ಕಲ್ಪಿಸುತ್ತದೆ.

ಉದ್ಯೋಗಿಗಳು ದೀರ್ಘಾವಧಿಗೆ ಪ್ರಯೋಜನ ಪಡೆಯುತ್ತಾರೆ, ಆದರೆ ಸಂಸ್ಥೆಗಳು ಹೆಚ್ಚಿನ ಹಣವನ್ನು ನೀಡಬೇಕಾಗಬಹುದು, ಏಕೆಂದರೆ ಮೂಲ ವೇತನದ ಹೆಚ್ಚಳವು ಪಿಎಫ್‌ಗೆ ಉದ್ಯೋಗದಾತರ ಕೊಡುಗೆ ಮತ್ತು ಅನುಪಾತದ ಪ್ರಮಾಣಾನುಗುಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೊಸ ಮಾರ್ಗಸೂಚಿಗಳು ಕಳೆದ ವರ್ಷ ಸಂಸತ್ತು ಅಂಗೀಕರಿಸಿದ ವೇತನ ನೀತಿ 2019 ರ ಭಾಗವಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪರಿಗಣಿಸಿದ ನಂತರ ಕೇಂದ್ರ ಸರ್ಕಾರವು ಅಂತಿಮ ನಿಯಮಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಹೊಸ ವ್ಯಾಖ್ಯಾನವು ವೇತನಕ್ಕೆ ಸಂಬಂಧಿಸಿದ ವಿವಿಧ ನಿಯಮಗಳನ್ನು ಸರಳಗೊಳಿಸುವ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಜ್ಞರ ಪ್ರಕಾರ, ಇದು ಖಾಸಗಿ ಸಂಸ್ಥೆಗಳು ಉದ್ಯೋಗಿಗಳನ್ನು ಪರಿಗಣಿಸುವ ವಿಧಾನವನ್ನೂ ಬದಲಾಯಿಸುತ್ತದೆ. ಪ್ರಸ್ತುತ, ಅನೇಕ ಖಾಸಗಿ ಕಂಪನಿಗಳು ಮೂಲ ವೇತನವನ್ನು ಒಟ್ಟು ವೇತನದ 20%ರಷ್ಟನ್ನು ಹೊಂದಿಸುತ್ತಿದೆ.  ಹೊಸ ನಿಯಮಗಳನ್ನು ಅನುಸರಿಸಲು, ಈ ಕಂಪನಿಗಳು ಮೂಲ ವೇತನವನ್ನು ಹೆಚ್ಚಿಸುವ ಮೂಲಕ ತಮ್ಮ ವೇತನ ಸಂರಚನೆಯನ್ನು  ನವೀಕರಿಸಬೇಕಾಗುತ್ತದೆ. ನಿಯಮಗಳ ಪ್ರಕಾರ, ತಿಂಗಳಿಗೆ 15 ಸಾವಿರ ರೂ. ಗಿಂತ ಹೆಚ್ಚಿನ ಹಣವನ್ನು ಪಡೆಯುವ ಉದ್ಯೋಗಿಗಳಿಗೆ ಪಿಎಫ್ ಕಡ್ಡಾಯವಲ್ಲ. ವೇತನ 15,000 ರೂ. ಗಿಂತ ಹೆಚ್ಚಿದ್ದರೆ ನಿಜವಾದ ವೇತನದಲ್ಲಿ ಪಿಎಫ್ ಕೊಡುಗೆ ನೀಡುವುದು ಉದ್ಯೋಗದಾತ ಮತ್ತು ಉದ್ಯೋಗಿಯ ಕಡೆಗೆ ಸ್ವಯಂಪ್ರೇರಿತವಾಗಿರುತ್ತದೆ.

ಔಪಚಾರಿಕ ವಲಯದ ಕೆಲವು ದೊಡ್ಡ ಕಂಪನಿಗಳು ಈಗಾಗಲೇ ಮೂಲ ವೇತನವನ್ನು 50%ರಷ್ಟು ಹೆಚ್ಚಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಸಂಸ್ಥೆಗಳಿಗೆ, ವೇತನದ ಸಂರಚನೆಯನ್ನು ಪರಿಷ್ಕರಿಸುವ ಅಗತ್ಯವು ಉದ್ಭವಿಸುವುದಿಲ್ಲ.

ಹೊಸ ನಿಯಮಾವಳಿ ಮಾನದಂಡಗಳು ಸಾಮಾಜಿಕ ಭದ್ರತೆ ಕೊಡುಗೆಗಳನ್ನು ಕಡಿಮೆ ಮಾಡಲು ಹೆಚ್ಚಿನ ಭತ್ಯೆಗಳೊಂದಿಗೆ ವೇತನ ಪ್ಯಾಕೇಜ್ ಅನ್ನು ನಿರ್ಮಿಸುವ ಪ್ರಸ್ತುತ ಅಭ್ಯಾಸವನ್ನು ಬದಲಾಯಿಸಿಕೊಳ್ಳುವಂತೆ ಸಂಸ್ಥೆಗಳ ಮೇಲೆ ಒತ್ತಡ ತರಬಹುದು. ಇದರಂತೆ ಮೂಲ ವೇತನ ಹೆಚ್ಚಾಗುವುದರೊಂದಿಗೆ, ಕಂಪನಿಗಳು ತಮ್ಮ ಪಿಎಫ್ ಕೊಡುಗೆ ಮತ್ತು ಗ್ರ್ಯಾಚುಟಿಗಾಗಿ ಹೆಚ್ಚಿನ ಪಾಲನ್ನು ನೀಡಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT