ವಾಣಿಜ್ಯ

ಮುಂದಿನ ಹಣಕಾಸು ವರ್ಷದ ದ್ವಿತೀಯಾರ್ಧಕ್ಕೆ ಬರಲಿದೆ ಎಲ್‌ಐಸಿ ಐಪಿಒ?

Raghavendra Adiga

ನವದೆಹಲಿ: ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್‌ನ (ಎಲ್ಐಸಿ) ಷೇರು ಮಾರಾಟಕ್ಕೆ ಅನುಕೂಲವಾಗುವಂತೆ ಪಟ್ಟಿಯನ್ನು ಮುಂದಿನ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆ ಂಆಡುವ ಸಾಧ್ಯತೆಗಳಿದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್‌ ನ ಕೆಲ ಅಂಶಗಳಷ್ಟು ಷೇರುಗಳನ್ನು ಕಾಸಗಿಯವರಿಗೆ ಮಾರಾಟ ಮಡುವುದಾಗಿ ಶನಿವಾರದ ಬಜೆಟ್ ಭಾಷಣದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ ಒಂದು ದಿನದ ತರುವಾಯ  ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. 

ಶನಿವಾರ ಮಂಡನೆಯಾಗಿರುವ ಕೇಂದ್ರ ಬಜೆಟ್  2020-21ರ ಸಮಯ ವಿತ್ತ ಸಚಿವೆ ಮುಂದಿನ ಹಣಕಾಸು ವರ್ಷದಲ್ಲಿ ಆರಂಭಿಕ ಕೊಡುಗೆಗಳ ಮೂಲಕ ಎಲ್ಐಸಿಯಷೇರು ಮಾರಾಟ ನಡೆಸಲಾಗುವುದು ಎಂದು ಘೋಷಿಸಿದ್ದರು.

ಆದರೆ ಹೀಗೆ ಎಲ್ಐಸಿಯ ಷೇರು ಮಾರಾಟ ನಡೆಯುವ ಮುನ್ನ ಹಲವಾರು ಪ್ರಕ್ರಿಯೆಗಳು ನಡೆಯಬೇಕಿದ್ದು ಕೆಲವು ಶಾಸಕಾಂಗ ಬದಲಾವಣೆಗಳ ಅಗತ್ಯವಿರುತ್ತದೆ ಎಂದು ಕುಮಾರ್ ಹೇಳಿದರು."ನಾವು ಪಟ್ಟಿ ಮಾಡುವ ಮುನ್ನ ನೂನು ಸಚಿವಾಲಯದೊಂದಿಗೆ ಸಮಾಲೋಚಿಸಬೇಕು, ಅಗತ್ಯವಿರುವ ಶಾಸಕಾಂಗ ಬದಲಾವಣೆಗಳು ನಡೆಯಬೇಕು. ನಾವು ಈಗಾಗಲೇ ಪ್ರಾರಂಭಿಸಿದ ಪ್ರಕ್ರಿಯೆಯನ್ನು ಒಳಗೊಂಡಂತೆ ಇತರ ವಿಧಾನಗಳನ್ನು  ಅನುಸರಿಸಿ ಅಂತಿಮವಾಗಿ 2021ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಪಟ್ಟಿ ಮಾಡುವಿಕೆ ನಡೆಯಲಿದೆ. "

ಎಲ್‌ಐಸಿಯನ್ನು ಪಟ್ಟಿ ಮಾಡುವುದರಿಂದ ಹೆಚ್ಚಿನ ಪಾರದರ್ಶಕತೆ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಇಕ್ವಿಟಿ ಮಾರುಕಟ್ಟೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಕುಮಾರ್ ಪಿಟಿಐಗೆ ಹೇಳಿದ್ದಾರೆ.

ಇನ್ನು ಎಷ್ಟು ಪ್ರಮಾಣದ ಷೇರು ಮಾರಾಟ ನಡೆಯಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಕಾರ್ಯದರ್ಶಿ "ಈ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ, ಬಹುಶಃ ಶೇ.10  ಆಗಿರಬಹುದು" ಎಂದಿದ್ದಾರೆ.ಒಟ್ಟು ಹೂಡಿಕೆಯ ತೆಗೆಯುವಿಕೆ ಗುರಿ 2.10 ಲಕ್ಷ ಕೋಟಿ ರೂ ಎಂದು ಅಂದಾಜಿದ್ದು ಮುಂದಿನ ಹಣಕಾಸು ವರ್ಷದಲ್ಲಿ ಎಲ್‌ಐಸಿ ಪಟ್ಟಿಯಿಂದ 90,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಸ್ತುತ ಸರ್ಕಾರವು ಲ್‌ಐಸಿಯಲ್ಲಿ ಶೇ 100 ರಷ್ಟು ಪಾಲನ್ನು ಹೊಂದಿದ್ದರೆ, ಐಡಿಬಿಐ ಬ್ಯಾಂಕಿನಲ್ಲಿ ಶೇ 46.5 ರಷ್ಟು ಪಾಲನ್ನು ಹೊಂದಿದೆ."ಸ್ಟಾಕ್ ಎಕ್ಸ್ಚೇಂಜ್ ನಲ್ಲಿಕಂಪನಿಗಳ ಪಟ್ಟಿ ಕಂಪನಿಯನ್ನು ಶಿಸ್ತುಬದ್ಧಗೊಳಿಸುತ್ತದೆ ಮತ್ತು ಹಣಕಾಸು ಮಾರುಕಟ್ಟೆಗಳಿಗೆ ಪ್ರವೇಶವನ್ನು ನೀಡುತ್ತದೆ ಮತ್ತು ಅದರ ಮೌಲ್ಯವನ್ನು  ವೃದ್ಧಿಸುತ್ತದೆ.  ಚಿಲ್ಲರೆ ಹೂಡಿಕೆದಾರರಿಗೆ ಹೀಗೆ ಮಾಡಿದಾಗ ಮಾರಾಟದಲ್ಲಿ  ಭಾಗವಹಿಸಲು ಇದು ಅವಕಾಶ ನೀಡುತ್ತದೆ. ಎಲ್ಐಸಿಯಲ್ಲಿ ತನ್ನ ಹಿಡುವಳಿಯ ಒಂದು ಭಾಗವನ್ನು ಮಾರಾಟ ಮಾಡಲು ಸರ್ಕಾರ  ತೀರ್ಮಾನಿಸಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ), ಮೂಲಕ ಇದು ನೆರವೇರುತ್ತದೆ"ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಮಾರುಕಟ್ಟೆ ವಹಿವಾಟು ನಡೆಸುವವರು  ಎಲ್ಐಸಿಯ ಬಗ್ಗೆ ಸಾಕಷ್ಟು ಮೆಚ್ಚುಗೆಯನ್ನು ಹೊಂದಿದ್ದಾರೆ ಮತ್ತು ಇದು ಸೌದಿ ಅರಾಮ್ಕೊ ಪಟ್ಟಿಗೆ ಹೋಲಿಕೆಯಾಗುವ "ದಶಕದ ಐಪಿಒ" ಆಗಿರಬಹುದು 60 ವರ್ಷದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಲ್‌ಐಸಿ ದೇಶದ ಅತಿದೊಡ್ಡ ವಿಮೆ ಸಂಸ್ಥೆಯಾಗಿದ್ದು ಮಾರುಕಟ್ಟೆ ಪಾಲಿನ ಶೇಕಡಾ 70 ಕ್ಕಿಂತಲೂ ಹೆಚ್ಚಿನ ನಿಯಂತ್ರಣ ಹೊಂದಿದೆ. ಈ ವಿಮಾ ಸಂಸ್ಥೆ ಪಾಲಿಸಿಗಳ ಸಂಖ್ಯೆಯಲ್ಲಿ ಶೇಕಡಾ 76.28 ಮತ್ತು ಮೊದಲ ವರ್ಷದ ಪ್ರೀಮಿಯಂಗಳಲ್ಲಿ ಶೇ 71 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.ಎಲ್‌ಐಸಿ ಐಡಿಬಿಐ ಬ್ಯಾಂಕ್ ಸೇರಿದಂತೆ ಹಲವು ಅಂಗಸಂಸ್ಥೆಗಳನ್ನು ಹೊಂದಿದೆ. ಇದು ಕಳೆದ ವರ್ಷ ಐಡಿಬಿಐ ಬ್ಯಾಂಕಿನಲ್ಲಿಕಂಟ್ರೋಲಿಂಗ್ ಪಾಲನ್ನು ಪಡೆದುಕೊಂಡಿತು

SCROLL FOR NEXT