ಸಾಂದರ್ಭಿಕ ಚಿತ್ರ 
ವಾಣಿಜ್ಯ

ಜನವರಿಯಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಶೇ. 2.2ರಷ್ಟು ವೃದ್ಧಿ

ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕ ಕಳೆದ ಜನವರಿಯಲ್ಲಿ ಹಿಂದಿನ ವರ್ಷದ ಡಿಸೆಂಬರ್ ನ ಶೇ. 2.1ಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ. 2.2ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. 

ನವದೆಹಲಿ: ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕ ಕಳೆದ ಜನವರಿಯಲ್ಲಿ ಹಿಂದಿನ ವರ್ಷದ ಡಿಸೆಂಬರ್ ನ ಶೇ. 2.1ಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ. 2.2ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. 

2019ರ ಏಪ್ರಿಲ್ ನಿಂದ 2020 ರ ಜನವರಿವರೆಗೆ ಸೂಚ್ಯಂಕದ ಸಂಚಿತ ಬೆಳವಣಿಗೆ ಶೇ 0.6ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಕಲ್ಲಿದ್ದಲು ಉತ್ಪಾದನೆ ಜನವರಿಯಲ್ಲಿ ಶೇ. 8.0 ರಷ್ಟು ವೃದ್ಧಿಸಿದೆ. ಇದರ ಸಂಚಿತ ಸೂಚ್ಯಂಕ  2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2.4 ರಷ್ಟು ಕುಸಿದಿದೆ.

ಕಚ್ಚಾ ತೈಲ ಉತ್ಪಾದನೆ ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಈ ವರ್ಷದ  ಜನವರಿಯಲ್ಲಿ ಶೇಕ 5.3 ರಷ್ಟು ಕುಸಿದಿದೆ. ಅದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.0 ರಷ್ಟು ಕುಸಿದಿದೆ.

ನೈಸರ್ಗಿಕ ಅನಿಲ ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 9.1 ರಷ್ಟು ಕುಸಿದಿದೆ. ಅದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಶೇ 4.3 ರಷ್ಟು ಕುಸಿದಿದೆ.

ಪೆಟ್ರೋಲಿಯಂ ಶುದ್ಧೀಕರಣ ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 1.9 ರಷ್ಟು ವೃದ್ಧಿಸಿದ್ದರೆ, ರಸಗೊಬ್ಬರ ಉತ್ಪಾದನೆ ಶೇ 0.1 ರಷ್ಟು ಕುಸಿದಿದೆ.

ಉಕ್ಕು ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 2.2 ರಷ್ಟು ಮತ್ತು ಸಿಮೆಂಟ್ ಉತ್ಪಾದನೆ ಶೇ 5.0 ರಷ್ಟು ವೃದ್ಧಿಸಿದೆ.

ವಿದ್ಯುತ್ ಉತ್ಪಾದನೆ ಕಳೆದ ಜನವರಿಯಲ್ಲಿ 2019ರ ಇದೇ ಅವಧಿಗೆ ಹೋಲಿಸಿದರೆ ಶೇ 2.8 ರಷ್ಟು ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ