ವಾಣಿಜ್ಯ

ಸತತ 2 ದಿನ ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ ನಷ್ಟ!

Srinivas Rao BV

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಈಕ್ವಿಟಿ ಮಾರುಕಟ್ಟೆ ಮೇಲೆ ಬೀರಿದ್ದು ಹೂಡಿಕೆದಾರರ ಸಂಪತ್ತಿನಲ್ಲಿ 3.11 ಲಕ್ಷದಷ್ಟು ಕುಸಿತ ಕಂಡಿದೆ.

ಸತತ ಎರಡು ದಿನಗಳಿಂದ ಈಕ್ವಿಟಿ ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಶುಕ್ರವಾರದಂದು ಸೆನ್ಸೆಕ್ಸ್ 162 ಪಾಯಿಂಟ್ ಗಳಿಗೆ ಅಂತ್ಯಗೊಂಡಿತ್ತು. ಅಷ್ಟೇ ಅಲ್ಲದೇ ಕಳೆದ ಎರಡು ಟ್ರೇಡಿಂಗ್ ಸೆಷನ್ ನಲ್ಲಿ ಬಿಎಸ್ಇ ಲಿಸ್ಟೆಡ್ ಕಂಪನಿಗಳು ಕುಸಿತ ಎದುರಿಸಿದ್ದವು 

ಅಮೆರಿಕ ಇರಾನ್ ನ ಸೇನಾ ಮುಖ್ಯಸ್ಥರನ್ನು ಹೊಡೆದುರುಳಿಸಿದ ಘಟನೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. 
 

SCROLL FOR NEXT