ವಾಣಿಜ್ಯ

ಜೆಎನ್ ಯು ಹಿಂಸಾಚಾರ: ಭಾರತದ ಉದ್ಯಮ ಸಮೂಹ ಪ್ರತಿಕ್ರಿಯಿಸಿದ್ದು ಹೀಗೆ 

Srinivas Rao BV

ದೆಹಲಿಯ ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ವಿಶ್ವವಿದ್ಯಾನಿಲಯದಲ್ಲಿ ಸಂಭವಿಸಿರುವ ಈ ಹಿಂಸಾಚಾರದ ಕುರಿತು ಭಾರತದ ಉದ್ಯಮ ಸಮೂಹ ಪ್ರತಿಕ್ರಿಯೆ ನೀಡಿದೆ. 

ಮಹಿಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹಿಂದ್ರ ಜೆಎನ್ ಯು ಹಿಂಸಾಚಾರದ ಬಗ್ಗೆ ಮಾತನಾಡಿದ್ದು, ನಿಮ್ಮ ಸಿದ್ಧಾಂತ ಏನೇ ಇರಲಿ, ರಾಜಕಾರಣವೇನೇ ಇರಲಿ, ನಂಬಿಕೆಗಳೇನೇ ಇರಲಿ, ನೀವು ಭಾರತೀಯರಾಗಿದ್ದರೆ ಶಸ್ತ್ರಸಜ್ಜಿತ, ಕಾನೂನೇ ಇಲ್ಲದ ಗೂಂಡಾಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೆಎನ್ ಯು ನಲ್ಲಿ ಹಿಂಸಾಚಾರ ನಡೆಸಿದವರನ್ನು ಪತ್ತೆ ಮಾಡಿ ಶಿಕ್ಷೆಗೊಳಪಡಿಸಬೇಕು ಎಂದು ಆನಂದ್ ಮಹಿಂದ್ರ ಹೇಳಿದ್ದಾರೆ. 

ಜೆಎನ್ ಯು ನಲ್ಲಿ ನಡೆದ ಹಿಂಸಾಚಾರ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಕಿರಣ್ ಮಜುಮ್ದಾರ್ ಷಾ ಇದು ಅಕ್ಷಮ್ಯ. ಹಿಂಸಾಚಾರವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಾರಿಕೊ ಅಧ್ಯಕ್ಷ ಹರ್ಷ್‌ ಮಾರಿವಾಲಾ ಸಹ ಜೆಎನ್ ಯು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,  ಅಹಿಂಸೆಯ ನೆಲದಲ್ಲಿ ಇಂತಹ ಹಿಂಸಾಚಾರಗಳಿಗೆ ಸಾಕ್ಷಿಯಾಗುವುದು ಶೋಭೆ ತರುವುದಿಲ್ಲ. ಈ ಸುದ್ದಿ ತಿಳಿದು ನೋವಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT