ವಾಣಿಜ್ಯ

ವೈದ್ಯರು, ನರ್ಸ್ ಗಳಿಗೆ ಈ ವರ್ಷಾಂತ್ಯದವರೆಗೆ ಶೇ.25 ರಷ್ಟು ರಿಯಾಯಿತಿ ಘೋಷಿಸಿದ ಇಂಡಿಗೋ

Lingaraj Badiger

ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ನರ್ಸ್ ಗಳಿಗೆ ಈ ವರ್ಷದ ಅಂತ್ಯದವರೆಗೆ ವಿಮಾನ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ.

ವೈದ್ಯರು ಮತ್ತು ನರ್ಸ್ ಗಳು ವಿಮಾನಯಾನದ ವೇಳೆ ತಾವು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಇಂಡಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

"ಇಂಡಿಗೊ ವೆಬ್‌ಸೈಟ್ ಮೂಲಕ ಕಾಯ್ದಿರಿಸುವಾಗ ಈ ರಿಯಾಯಿತಿಯನ್ನು ನೀಡಲಾಗುವುದು, ಇದು ಜುಲೈ 01, 2020 ರಿಂದ ಡಿಸೆಂಬರ್ 31, 2020 ರವರೆಗೆ ಅನ್ವಯವಾಗಲಿದೆ" ಎಂದು ಇಂಡಿಗೋ ತಿಳಿಸಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಂತರ ಮೇ 25 ರಿಂದ ದೇಶೀಯ ವಿಮಾನಯಾನ ಆರಂಭವಾಗಿದೆ. ಆದರೆ ಪ್ರಯಾಣಿಕರ ಕೊರತೆ ಎದುರಾಗಿದೆ.

SCROLL FOR NEXT