ವಾಣಿಜ್ಯ

10 ಮಿಲಿಯನ್ ಡೌನ್ ಲೋಡ್ ದಾಟಿದ ಟಿಕ್ ಟಾಕ್ ಗೆ ಪರ್ಯಾಯ ಚಿಂಗಾರಿ ಆ್ಯಪ್!

Srinivas Rao BV

ಬೆಂಗಳೂರು: ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ 59 ಸಾಮಾಜಿಕ ಜಾಲತಾಣ ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಭಾರತದ ಆ್ಯಪ್ ಗಳಿಗೆ ದಿಢೀರ್ ಬೇಡಿಕೆ ಹೆಚ್ಚಾಗಿದೆ. 

ಟಿಕ್ ಟಾಕ್ ನಿಷೇಧದ ನಂತರ ಅದೇ ಮಾದರಿಯ ಭಾರತದ ಆ್ಯಪ್ ಚಿಂಗಾರಿ 10 ಮಿಲಿಯನ್ ಡೌನ್ ಲೋಡ್ ನ್ನು ಕಂಡಿದ್ದು ಕಳೆದ ಒಂದು ವಾರದಿಂದ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಟಾಪ್ 2 ಆ್ಯಪ್ ಗಳ ಪೈಕಿ ಒಂದಾಗಿದೆ. "ಗ್ರಾಹಕರ ಸಂಖ್ಯೆ ಹಾಗೂ ಆ್ಯಪ್ ನ ದಿನನಿತ್ಯದ ಬಳಕೆಯ ಅವಧಿ ಏರಿಕೆಯಾಗುತ್ತಿದೆ. ಗ್ರಾಹಕರಿಗೆ ಉತ್ತಮವಾಗಿರುವುದನ್ನು ನೀಡುವುದಕ್ಕೆ ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದು ಚಿಂಗಾರಿಯ ಸಂಸ್ಥಾಪಕರಲ್ಲಿ ಒಬ್ಬರಾದ ಬಿಸ್ವಾತ್ಮ ನಾಯಕ್ ಹೇಳಿದ್ದಾರೆ.

ಇದಕ್ಕೂ ಮುನ್ನ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೆ ಆ್ಯಪ್ ಮೂರು ಮಿಲಿಯನ್ ಡೌನ್ ಲೋಡ್ ಆಗಿತ್ತು. ಕೇವಲ 72 ಗಂಟೆಗಳಲ್ಲಿ 5 ಲಕ್ಷ ಜನರು ಈ ಆ್ಯಪ್ ನ ಡೌನ್ ಲೋಡ್ ಮಾಡಿದ್ದರು.

SCROLL FOR NEXT