ವಾಣಿಜ್ಯ

ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆ ಪ್ರಮುಖ ಆದ್ಯತೆ: ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Sumana Upadhyaya

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 7ನೇ ಬ್ಯಾಂಕಿಂಗ್ ಮತ್ತು ಆರ್ಥಿಕತೆಯ ಸಮ್ಮೇಳನದಲ್ಲಿ ವಿಡಿಯೊ ಕಾಲ್ ಮೂಲಕ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ರಜನೀಶ್ ಕುಮಾರ್ ಜೊತೆಗೆ ಸಂವಾದ ನಡೆಸಿದರು.

ಕೋವಿಡ್-19ನ ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ಆರ್ಥಿಕತೆ, ಸರ್ಕಾರದ ನೀತಿ ನಿಯಮಗಳ ಬಗ್ಗೆ ಆರ್ ಬಿಐ ಗವರ್ನರ್ ಏನು ಹೇಳಿದ್ದಾರೆ, ನೋಡೋಣ ಬನ್ನಿ:
- ಕಳೆದ 100 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ ಕೋವಿಡ್-19.
-ಈ ಸಂಕಷ್ಟದ ಸಮಯದಲ್ಲಿ ಹಣಕಾಸು ವ್ಯವಸ್ಥೆಗಳನ್ನು ಕಾಪಾಡಲು ಆರ್ ಬಿಐ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಸರ್ಕಾರ ತೆಗೆದುಕೊಂಡಿರುವ ನೀತಿ ಕ್ರಮಗಳೇನೆಂದರೆ-
1. ವಿತ್ತೀಯ ನೀತಿ ಕ್ರಮಗಳು-ಕೋವಿಡ್-19 ಬರುವುದಕ್ಕೂ ಮೊದಲೇ ಆರ್ ಬಿಐ ವಸತಿ ಹಣಕಾಸು ನೀತಿ ಕೈಗೊಂಡಿತ್ತು.
2. ಕಳೆದ ವರ್ಷ ಫೆಬ್ರವರಿ 2019ರ ನಂತರ ಸಂಚಿತ ಆಧಾರದ ಮೇಲೆ ಕೋವಿಡ್-19 ಪ್ರಾರಂಭವಾಗುವವರೆಗೆ ನಾವು ರೆಪೊ ದರವನ್ನು 250 ಬೇಸಿಸ್ ಪಾಯಿಂಟ್ ಗಳಷ್ಟು(ಶೇಕಡಾ 2.5)ರಷ್ಟು ಕಡಿತ ಮಾಡಿದ್ದೇವೆ.
3. ಮಾರುಕಟ್ಟೆ ವಿಶ್ವಾಸ ಬಲವರ್ಧನೆಗೆ ಮತ್ತು ಹಣದ ಹರಿಯುವಿಕೆ ಸುಗಮವಾಗಲು ಸಾಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಕ್ರಮಗಳು.
4. ಫೆಬ್ರವರಿಯಿಂದ 9.57 ಲಕ್ಷ ಕೋಟಿ ರೂಪಾಯಿ ಮೊತ್ರದ ಕ್ರಮಗಳು ಆರ್ ಬಿಐನಿಂದ ಪ್ರಕಟ, ಅದು ದೇಶದ ಜಿಡಿಪಿಯ ಶೇಕಡಾ 4.5ಕ್ಕೆ ಸಮ.
-ದೇಶದ ಸ್ಥಿತಿಯಲ್ಲಿ ಆರ್ಥಿಕತೆ ಬಹುಮುಖ್ಯ ಅಂಶ.
-ಹಣಕಾಸು ಸ್ಥಿರತೆಗೆ ಸಹ ಅಷ್ಟೇ ಪ್ರಾಮುಖ್ಯತೆ.
-ಎನ್ ಬಿಎಫ್ ಸಿ ಮತ್ತು ಮ್ಯೂಚುವಲ್ ಫಂಡ್ ಗಳ ಮೇಲಿನ ವಿಮೋಚನಾ ಒತ್ತಡಗಳನ್ನು ನಿಗಾವಹಿಸುವುದು.

SCROLL FOR NEXT