ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಜಾಗತಿಕ ಟೆಲಿಕಾಂ ಸಂಸ್ಥೆಗಳಿಗೆ 'ಜಿಯೋ'ನೇ ಮಾದರಿ: ಅಮೆರಿಕ

ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.

ಜಾಗತಿಕ ಟೆಲಿಕಾಂ ಸಂಸ್ಥೆಗಳಿಗೆ 'ಜಿಯೋ'ನೇ ಮಾದರಿ: ಅಮೆರಿಕ
Srinivas Rao BV
Updated On : 22 Jul 2020, 12:38 pm

ನ್ಯೂಯಾರ್ಕ್: ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.

ಇಡಿ ಜಗತ್ತು ಈಗ 5 ಜಿ ನೆಟ್ವರ್ಕ್ ಬಗ್ಗೆ ಮಾತನಾಡುತ್ತಿದ್ದು, ಚೀನಾದ ಮೇಲಿನ ಟೆಲಿಕಾಂ ಉಪಕರಣಗಳ ಮೇಲಿನ ಅವಲಂಬನೆಯನ್ನು ಮೆಟ್ಟಿ 5 ಜಿ ನೆಟ್ವರ್ಕ್ ಗುರಿ ಸಾಧಿಸುವ ಬಗ್ಗೆಯೂ ಗಂಭೀರ ಚಿಂತನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳ ನಡುವೆ ಜಿಯೋ ಸಂಸ್ಥೆಯ ಇತ್ತೀಚಿನ ಘೋಷಣೆ, ನಡೆಗಳನ್ನು ಅಮೆರಿಕ ಜಗತ್ತಿಗೇ ಮಾದರಿ ಎಂದಿರುವುದು ಮಹತ್ವ ಪಡೆದುಕೊಂಡಿದೆ. 

ಜಾಗತಿಕ ಟೆಲಿಕಾಂ ಸಂಸ್ಥೆಗಳನ್ನು ಚೀನಾದ ಅವಲಂಬನೆ, ಹೂಡಿಕೆಯಿಂದ ಹೊರಸೆಳೆಯಲು ಯತ್ನಿಸುತ್ತಿರುವ ಸೈಬರ್ ರಾಯಭಾರಿ ( ಸೈಬರ್ ಡಿಪ್ಲೊಮಾಟ್) ರಾಬರ್ಟ್ ಎಲ್. ಸ್ಟ್ರೇಯರ್ "5ಜಿ ದೊಡ್ಡ ಅತೀಂದ್ರಿಯ ವಿಷಯವೇನಲ್ಲ ಎಂಬ ಪಾಠವನ್ನು ಜಿಯೋ ಕಲಿಸಿದೆ. 4ಜಿ ತಂತ್ರಜ್ಞಾನದ ಕಾಂಪೊನೆಂಟ್ ಗಳನ್ನೇ 5 ಜಿ ಸಹ ಹೊಂದಿರಲಿದೆ, ಆದರೆ ಬೇರೆ ಹಂತಕ್ಕೆ ವಿಕಸನಗೊಂಡಿರಲಿದೆಯಷ್ಟೇ ಎಂದು ರಾಬರ್ಟ್ ಎಲ್ ಸ್ಟ್ರೇಯರ್ ತಿಳಿಸಿದ್ದನ್ನು ಐಎಎನ್ಎಸ್ ವರದಿ ಮಾಡಿದೆ.

Advertisement

Advertisement

ಜಾಗತಿಕ ಟೆಲಿಕಾಂ ಸಂಸ್ಥೆಗಳು 5 ಜಿ ಗಾಗಿ ಹುವಾಯಿ ಸೇರಿದಂತೆ ಚೀನಾದ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳ ಸಂಸ್ಥೆಗಳ ಮೇಲೆ ಅವಲಂಬಿತವಾಗುವ ಬದಲು ಜಿಯೋ ಮಾದರಿಯಲ್ಲಿ ದೇಶೀಯವಾಗಿ 5 ಜಿ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಬೇಕು, ಜಿಯೋ ಮಾದರಿಯನ್ನು ಅನುಸರಿಸಬೇಕೆಂದು ರಾಬರ್ಟ್ ಎಲ್. ಸ್ಟ್ರೇಯರ್ ಅಭಿಪ್ರಾಯಪಟ್ಟಿದ್ದಾರೆ.

ಜುಲೈ.15 ರಂದು ರಿಲಾಯನ್ಸ್ ನ 43 ನೇ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಮೇಡ್-ಇನ್-ಇಂಡಿಯಾ 5 ಜಿ ಸೊಲ್ಯೂಷನ್ಸ್ ನ್ನು ಘೋಷಿಸಿದ್ದರು.

ಏರ್ ಟೆಲ್, ವೋಡಾಫೋನ್, ಐಡಿಯ, ಬಿಎಸ್ಎನ್ಎಲ್ ಗಳೂ ಸಹ ಚೀನಾದ ಮೇಲಿನ ಅವಲಂಬನೆಯನ್ನು ಬಿಡಬೇಕೆಂದು ರಾಬರ್ಟ್ ಎಲ್. ಸ್ಟ್ರೇಯರ್ ಹೇಳಿದ್ದಾರೆ. 5 ಜಿ ಅಭಿವೃದ್ಧಿಪಡಿಸುವಲ್ಲಿ ವಿಶ್ವಾಸಾರ್ಹ ಸಂಸ್ಥೆಗಳೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿರುವ ಸ್ಪೇನ್ ನ ಟೆಲಿಫೋನಿಕಾ, ಫ್ರಾನ್ಸ್ ನ ಆರೆಂಜ್, ಭಾರತದ ಜಿಯೋ, ಆಸ್ಟ್ರೇಲಿಯಾದ ಟೆಲ್ಸ್ಟ್ರಾ, ದಕ್ಷಿಣ ಕೊರಿಯಾದ ಎಸ್ ಕೆ, ಕೆಟಿ, ಜಪಾನ್ ನ ಎನ್ ಟಿಟಿ ಟೆಲಿಕಾಂ ಸಂಸ್ಥೆಗಳ ಬಗ್ಗೆ ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಸ್ಟ್ರೇಯರ್ ಹೇಳಿಕೆಗೂ ಮುನ್ನ ಅಮೆರಿಕ ಸಚಿವ ಮೈಕ್ ಪೋಂಪಿಯೋ ಸಹ ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement