ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ವರ್ಣಭೇದಕ್ಕೆ ಸತತ ಟೀಕೆ: ಬದಲಾಗಲಿದೆ ಫೇರ್ & ಲೌವ್ಲಿ ಹೆಸರು!

ವರ್ಣಭೇದದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಫೇರ್&ಲೌವ್ಲಿ ಕ್ರೀಮ್ ನ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.

ವರ್ಣಭೇದಕ್ಕೆ ಸತತ ಟೀಕೆ: ಬದಲಾಗಲಿದೆ ಫೇರ್& ಲೌವ್ಲಿ ಹೆಸರು!
Srinivas Rao BV
Updated On : 26 Jun 2020, 12:31 pm

ವರ್ಣಭೇದದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಫೇರ್&ಲೌವ್ಲಿ ಕ್ರೀಮ್ ನ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. 

ಎಲ್ಲಾ ವರ್ಣದ ತ್ವಚೆಗೆ ಸರಿಹೊಂದುವ ಸೌಂದರ್ಯ ವರ್ಧಕವನ್ನಾಗಿ ಈ ಕ್ರೀಮ್ ನ್ನು ಪರಿಚಯಿಸಲು ಸಂಸ್ಥೆ ಚಿಂತನೆ ನಡೆಸಿದೆ. 
ಅಮೆರಿಕಾದಲ್ಲಿ ಕಪ್ಪು ವರ್ಣಿಯರ ಮೇಲೆ ನಡೆದ ಜನಾಂಗೀಯ ದಾಳಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ವರ್ಣಭೇದದ ವಿರುದ್ಧ ಆಕ್ರೋಶ ತೀವ್ರಗೊಂಡಿತ್ತು. ತ್ವಚೆಯವರ್ಣವನ್ನೇ ಮುಖ್ಯವಾಗಿರಿಸಿಕೊಂಡಿರುವ ಫೇರ್&ಲೌವ್ಲಿ ಹೆಸರಿನ ಕ್ರೀಮ್ ಬಗ್ಗೆಯೂ ಸಹಜವಾಗಿಯೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗತೊಡಗಿತ್ತು. ಈ ಬೆನ್ನಲ್ಲೇ ಸಂಸ್ಥೆ ವರ್ಣಭೇದವನ್ನು ಸೂಚಿಸುವ ಫೇರ್&ಲೌವ್ಲಿ ಎಂಬ ಹೆಸರನ್ನು ಕೈಬಿಟ್ಟು ಆ ಕ್ರೀಮ್ ಗೆ ಹೊಸ ಹೆಸರನ್ನು ಪರಿಚಯಿಸುವುದಾಗಿ ತಿಳಿಸಿದೆ. 

ಈ ಬಗ್ಗೆ ಮಾತನಾಡಿರುವ ಹಿಂದೂಸ್ಥಾನ್ ಯುನಿಲಿವರ್ ನ ಅಧ್ಯಕ್ಷ ಸಂಜೀವ್ ಮೆಹ್ತಾ, ಎಲ್ಲಾ ವರ್ಣಗಳ ತ್ವಚೆಗೆ ಸೂಕ್ತವಾಗುವ ಸೌಂದರ್ಯವರ್ಧಗಳಿಗೆ ಸಂಸ್ಥೆ ಬದ್ಧವಾಗಿದೆ. ಫೇರ್& ಲೌವ್ಲಿ ಹೆಸರು ಅಪ್ರಸ್ತುತವಾಗಿದೆ. ಸೌಂದರ್ಯವರ್ಧಕ ಎಲ್ಲಾ ವರ್ಣದ ತ್ವಚೆಗಳಿಗೂ ಇರುವಂತಹದ್ದು, ಹೀಗಾಗಿ ಹೆಸರು ಬದಲಾವಣೆ ಮಾಡುತ್ತಿದ್ದೇವೆ ಎಂದು ಸಂಜೀವ್ ಮೆಹ್ತಾ ಹೇಳಿದ್ದಾರೆ. 

Advertisement

Advertisement

2019 ರಲ್ಲಿ ಜಾಹಿತಿನಿಂದ ಕಪ್ಪು-ಬಿಳುಪಿನ ಮುಖಗಳನ್ನು ಕೈಬಿಟ್ಟಿದ್ದ ಸಂಸ್ಥೆ ವರ್ಣಭೇದದ ಸಂದೇಶ ನೀಡುವ ಜಾಹಿರಾತುಗಳನ್ನು ನಿಲ್ಲಿಸಿ ಬದಲಾವಣೆ ಮಾಡಿಕೊಂಡಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement