ಸಾಂದರ್ಭಿಕ ಚಿತ್ರ 
ವಾಣಿಜ್ಯ

ವಿಳಂಬ ಮಾಡದೆ ಬಾಕಿ ಪಾವತಿಸುವಂತೆ ಏರ್ಟೆಲ್, ವೋಡಾಫೋನ್, ಇತರೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ

ವಿಳಂಬ ಮಾಡದೇ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್‌)ವನ್ನು ಪಾವತಿಸುವಂತೆ ಭಾರತೀ ಏರ್ಟೆಲ್‌,  ವೋಡಾಫೋನ್‌ ಐಡಿಯಾ ಹಾಗೂ ಇತರೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬುಧವಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ವಿಳಂಬ ಮಾಡದೇ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್‌)ವನ್ನು ಪಾವತಿಸುವಂತೆ ಭಾರತೀ ಏರ್ಟೆಲ್‌,  ವೋಡಾಫೋನ್‌ ಐಡಿಯಾ ಹಾಗೂ ಇತರೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬುಧವಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಪತ್ರ ಬರೆದಿರುವ ಟೆಲಿಕಾಂ ಇಲಾಖೆ, ವಿಳಂಬವಿಲ್ಲದೆ ಬಾಕಿ ಹಣವನ್ನು ಪಾವತಿಸಿ ಮತ್ತು ಪಾವತಿಗಳ ವಿವರವನ್ನು ಸಲ್ಲಿಸಿ(ಸ್ವಯಂ-ಮೌಲ್ಯಮಾಪನ ಮೊತ್ತಗಳ ವಿವರಣೆ), ಅದು ಸರಿಯಾದ ಸಮನ್ವಯಕ್ಕೆ ಅಗತ್ಯ ಎಂದು ಹೇಳಿದೆ.

ಸರ್ಕಾರ ಇದುವರೆಗೆ 26 ಸಾವಿರ ಕೋಟಿ ರೂಪಾಯಿ ಎಜಿಆರ್ ಬಾಕಿ ಸ್ವೀಕರಿಸಿದ್ದು, ಉಳಿದ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇತ್ತೀಚಿಗಷ್ಟೇ ದೇಶದ ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಎಜಿಆರ್‌ ₹1.47 ಲಕ್ಷ ಕೋಟಿ ರೂ. ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೆ ಈ ಸಂಬಂಧ ಟೆಲಿಕಾಂ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್