ರಜನೀಶ್ ಕುಮಾರ್ 
ವಾಣಿಜ್ಯ

ಭಯಪಡುವ ಅಗತ್ಯವಿಲ್ಲ, ತಾಳ್ಮೆಯಿಂದಿರಿ: ಯೆಸ್ ಬ್ಯಾಂಕಿನ ಬೆಳವಣಿಗೆ ಕುರಿತು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್

 ಯೆಸ್​ ಬ್ಯಾಂಕ್ ಬೆಳವಣಿಗೆಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.. "ಭಯಭೀತರಾಗಲು ಏನಿದೆ, ಭಯಪಡುವ ಅಗತ್ಯವಿಲ್ಲ, ಎಲ್ಲಾ ಠೇವಣಿದಾರರು ಸುರಕ್ಷಿತರಾಗಿದ್ದಾರೆ ಆರ್ಬಿಐ ಗವರ್ನರ್ ಸಹ ಇದನ್ನೇ ಹೇಳಿದ್ದಾರೆ.ತಾಳ್ಮೆಯಿಂದಿರಿ, ಎಲ್ಲವೂ ಚೆನ್ನಾಗಿರುತ್ತದೆ" ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ನವದೆಹಲಿ: ಯೆಸ್​ ಬ್ಯಾಂಕ್ ಬೆಳವಣಿಗೆಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.. "ಭಯಭೀತರಾಗಲು ಏನಿದೆ, ಭಯಪಡುವ ಅಗತ್ಯವಿಲ್ಲ, ಎಲ್ಲಾ ಠೇವಣಿದಾರರು ಸುರಕ್ಷಿತರಾಗಿದ್ದಾರೆ ಆರ್ಬಿಐ ಗವರ್ನರ್ ಸಹ ಇದನ್ನೇ ಹೇಳಿದ್ದಾರೆ.ತಾಳ್ಮೆಯಿಂದಿರಿ, ಎಲ್ಲವೂ ಚೆನ್ನಾಗಿರುತ್ತದೆ" ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಯೆಸ್​ ಬ್ಯಾಂಕ್ ಷೇರುಗಳು  21.70 ರೂ.ಗಳಿಂದ (ಶೇ 58.97) 15.10 ರೂ.ಗೆ ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ತಡರಾತ್ರಿ ವಿನಿಮಯ ಕೇಂದ್ರಗಳಿಗೆ ನೀಡಿದ ಮಾಹಿತಿಯಲ್ಲಿ, ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಅವಕಾಶವನ್ನು ಅನ್ವೇಷಿಸಲು ತನ್ನ ಆಡಳಿತ ಮಂಡಲಿ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಎಫ್‌ಒ ಪ್ರಶಾಂತ್ ಕುಮಾರ್ ಅವರನ್ನು ಯೆಸ್ ಬ್ಯಾಂಕಿನ  ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಖಾಸಗಿ ವಲಯದ ಬ್ಯಾಂಕಿನ ಆಡಳಿತ ಮಂಡಳಿಯನ್ನು ಗುರುವಾರ ನಿಷೇಧ ಮಾಡಿದ್ದ  ಆರ್‌ಬಿಐ ಠೇವಣಿ ಹಿಂಪಡೆಯುವಿಕೆಯನ್ನು ಒಂದು ಖಾತೆಗೆ ಒಂದು ತಿಂಗಳವರೆಗೆ 50,000 ರೂ.  ಎಂದು ಮಿತಿ ಹೇರಿತ್ತು.

ಈ ಹಿಂದೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್ 30 ದಿನಗಳಲ್ಲಿ ಯೆಸ್ ಬ್ಯಾಂಕ್ ಅನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಶೀಘ್ರದಲ್ಲಿ ತರಲಿದೆ ಎಂದು ಹೇಳಿದ್ದರು."ವೈಯಕ್ತಿಕ ಅಸ್ತಿತ್ವದ ಸಮಸ್ಯೆ ಮಿತಿಯಲ್ಲಿ ಮಾತ್ರವಲ್ಲದೆ ಭಾರತೀಯ ಹಣಕಾಸು ಮತ್ತು ಬ್ಯಾಂಕ್ ವಲಯಗಳ ಸ್ಥಿರತೆ ಮತ್ತು ಸ್ಥಾಪಕತ್ವವನ್ನು ನಿರ್ವಹಿಸಲು ದೊಡ್ಡ ಮಟ್ಟದಲ್ಲಿ ಯಸ್ ಬ್ಯಾಂಕ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಂದು ನಮ್ಮ ಬ್ಯಾಂಕಿಂಗ್ ವಲಯ ಅಪಾಯದಲ್ಲಿದೆ ಎಂದು ಭಾವಿಸಬೇಕಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ವ್ಯವಹಾರ ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಸವಾಲುಗಳನ್ನು ಆರ್ ಬಿಐ ಸಮರ್ಥವಾಗಿ ಎದುರಿಸಲಿದೆ" ಅವರು ಹೇಳಿದ್ದಾರೆ.

ಯೆಸ್ ಬ್ಯಾಂಕ್ ಕುರಿತು ಆರ್‌ಬಿಐ ನಿರ್ಧಾರವು ಹಣಕಾಸು ಕ್ಷೇತ್ರದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 30 ದಿನಗಳಲ್ಲಿ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ನಿರ್ಣಯವನ್ನು ಶೀಘ್ರವಾಗಿ ಮಾಡಲಾಗುವುದು ಎಂದು ಅವರು ಹೇಳಿದರು. ಗುರುವಾರ, ಆರ್‌ಬಿಐ ಯೆಸ್ ಬ್ಯಾಂಕ್ ಮಂಡಳಿಯನ್ನು 30 ದಿನಗಳ ಕಾಲ ರದ್ದುಗೊಳಿಸಿ ನಿರ್ವಾಹಕರನ್ನು ನೇಮಿತ್ತು. ಅಲ್ಲದೆ ಈ ಒಂದು ತಿಂಗಳ ಅವಧಿಯಲ್ಲಿ ಬ್ಯಾಂಕಿನ ಖಾತೆದಾರರು ಮಾಸಿಕ 50,000 ರೂ.ಮಾತ್ರ ವಿತ್ ಡ್ರಾ ಮಾಡುವಂತೆ ನಿಯಮ ಹೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT