ಸಂಗ್ರಹ ಚಿತ್ರ 
ವಾಣಿಜ್ಯ

ಅತ್ತ ಕೊರೋನಾ, ಇತ್ತ ಯೆಸ್ ಬ್ಯಾಂಕ್ ಬಿಕ್ಕಟ್ಟು: ತಲ್ಲಣಗೊಂಡ ಷೇರುಮಾರುಕಟ್ಟೆ, 3.85 ಲಕ್ಷ ಕೋಟಿ ನಷ್ಟ!

ಒಂದೆಡೆ ಕೊರೋನಾ ವೈರಸ್ ಮತ್ತೊಂದೆಡೆ ಯೆಸ್ ಬ್ಯಾಂಕ್ ಬಿಕ್ಕಟ್ಟು ಭಾರತೀಯ ಷೇರುಮಾರುಕಟ್ಟೆ ತಲ್ಲಣಿಸುವಂತೆ ಮಾಡಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರು ಬರೊಬ್ಬರಿ 3.85 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.

ಮುಂಬೈ: ಒಂದೆಡೆ ಕೊರೋನಾ ವೈರಸ್ ಮತ್ತೊಂದೆಡೆ ಯೆಸ್ ಬ್ಯಾಂಕ್ ಬಿಕ್ಕಟ್ಟು ಭಾರತೀಯ ಷೇರುಮಾರುಕಟ್ಟೆ ತಲ್ಲಣಿಸುವಂತೆ ಮಾಡಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರು ಬರೊಬ್ಬರಿ 3.85 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.

ಯೆಸ್‌ ಬ್ಯಾಂಕ್‌ ಬಿಕ್ಕಟ್ಟು ಮತ್ತು ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರ ಪರಿಣಾಮ ಶುಕ್ರವಾರ ಮುಂಬೈ ಷೇರುಪೇಟೆ ಮೇಲೆ ಗಂಭೀರ ಪರಿಣಾಮ ಬೀರಿದ್ದು ಸೆನ್ಸೆಕ್ಸ್  ಅರಂಭಿಕ ವಹಿವಾಟಿನಲ್ಲೇ 1,450 ಅಂಶಗಳವರೆಗೂ ಇಳಿಕೆಯಾಗಿ, 37,011.09 ಅಂಶ ತಲುಪಿತ್ತು. ಅಲ್ಲದೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 362.30 ಅಂಶಗಳ ಕುಸಿತ ಕಂಡು, 10,906.70 ಅಂಶಗಳ ಅಂಕ ಕುಸಿತಕಂಡಿತು.

ಷೇರುಪೇಟೆಯ ಈ ದೊಡ್ಡ ಪತನದಿಂದಾಗಿ ಒಂದೇ ದಿನದಲ್ಲಿ ಹೂಡಿಕೆದಾರರು ಬರೊಬ್ಬರಿ 3.85 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಪ್ರಸ್ತುತ ವಾರಾಂತ್ಯದ ವಹಿವಾಟಿನಲ್ಲಿ ಷೇರುಮಾರುಕಟ್ಟೆ ಅಲ್ಪ ಚೇತರಿಕೆ ಕಂಡಿದ್ದು, 893.99 ಅಂಕ ಕುಸಿತದೊಂದಿಗೆ ಸೆನ್ಸೆಕ್ಸ್ 37,576.62 ಅಂಕಗಳಿಗೆ ಕುಸಿದಿದೆ. ನಿಫ್ಟಿ ಕೂಡ ದಿನದ ವಹಿವಾಟು ಅಂತ್ಯಕ್ಕೆ 279.55 ಅಂಕಗಳ ಕುಸಿತಗೊಂಡಿದ್ದು, 10,989.45 ಅಂಕಗಳಿಗೆ ಕುಸಿತವಾಗಿದೆ.

ಇಂದಿನ ವಹಿವಾಟಿನಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಗಳ ಷೇರುಮೌಲ್ಯ ಶೇ 7.3 ರಷ್ಟು ಕುಸಿದಿದೆ. ಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್), ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ನಷ್ಟ ಅನುಭವಿಸಿದೆ.

7 ವರ್ಷದಲ್ಲೇ ಅತಿಹೆಚ್ಚು ಕುಸಿತ ಕಂಡ ಎಸ್‌ಬಿಐ ಷೇರು
ಇನ್ನು ಯೆಸ್ ಬ್ಯಾಂಕ್ ಬಿಕ್ಕಟ್ಟು ಭಾರತೀಯ ಸ್ಟೇಟ್ ಬ್ಯಾಂಕ್ ಷೇರು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಎಸ್ ಬಿಐ ಷೇರು ಮಾರಾಟ ಶುಕ್ರವಾರ ಶೇ.7 ರಷ್ಟು ಕುಸಿದಿವೆ. ಆ ಮೂಲಕ ಸರ್ಕಾರಿ ಒಡೆತನದ ಎಸ್‌ಬಿಐ ಷೇರು ಮಾರಾಟದಲ್ಲಿ ಕಳೆದ ಏಳು ವರ್ಷಗಳಲ್ಲಿ ಅತಿಹೆಚ್ಚು ಇಳಿಕೆ ಕಂಡಂತಾಗಿದೆ. ಯೆಸ್‌ ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಅದರ ನಿರ್ವಹಣಾ ಜವಾಬ್ದಾರಿಯನ್ನು ಆರ್‌ಬಿಐ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನೇತೃತ್ವದ ಬ್ಯಾಂಕರ್‌ಗಳ ಒಕ್ಕೂಟಕ್ಕೆ ವಹಿಸಿಕೊಟ್ಟಿತ್ತು. ಆ ಕಾರಣ, ಯೆಸ್ ಬ್ಯಾಂಕ್ ಷೇರುಗಳನ್ನು ಎಸ್‌ಬಿಐ ಖರೀದಿಸುತ್ತಿದೆ ಎಂಬ ವದಂತಿಗಳು ಹರಡಿ, ಎಸ್‌ಬಿಐ ಷೇರುಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. 

ಇನ್ನು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರ ಪರಿಣಾಮ ಆರ್‌ಬಿಐನಿಂದ ನಿಷೇಧಕ್ಕೆ ಒಳಗಾದ ಯೆಸ್‌ ಬ್ಯಾಂಕ್‌ ಷೇರುಗಳು ಇಂದಿನ ವಹಿವಾಟಿನಲ್ಲಿ ಶೇ.85ರಷ್ಟು ಕುಸಿತ ಕಂಡಿವೆ.  ಇದೇ ವಿಚಾರವಾಗಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಬಿಐ, ‘ಯೆಸ್‌ ಬ್ಯಾಂಕ್‌ನ ಷೇರುಗಳನ್ನು ಖರೀದಿಸುವ ಯಾವುದೇ ಮಾತುಕತೆಗಳು ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT