ವಾಣಿಜ್ಯ

ಖಾತೆದಾರರಿಗೆ ಶಾಕ್! ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.3ಕ್ಕಿಳಿಸಿದ ಎಸ್‌ಬಿಐ 

Raghavendra Adiga

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್‌ಬಿಐ  ತನ್ನೆಲ್ಲಾ ಉಳಿತಾಯ ಬ್ಯಾಂಕ್ (ಎಸ್‌ಬಿ) ಖಾತೆಗಳ ಬಡ್ಡಿದರವನ್ನು ಶೇಕಡಾ 3ಕ್ಕೆ ಕಡಿತಮಾಡಿದೆ. ಇದು ಬ್ಯಾಂಕಿನ  ಇದು 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಅಲ್ಲದೆ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ನಗದು ಕಾಯ್ದುಕೊಳ್ಳುವ  ಅವಶ್ಯಕತೆಯನ್ನೂ ಬ್ಯಾಂಕ್ ಮನ್ನಾ ಮಾಡಿದೆ. 'ಗ್ರಾಹಕರ ಹಿತ' ವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಎಸ್‌ಎಂಎಸ್ ಶುಲ್ಕವನ್ನು ಸಹ ಮನ್ನಾ ಮಾಡಿದೆ, ಇದು ಎಲ್ಲಾ ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ.

"ಎಸ್‌ಬಿ ಖಾತೆಯ ಮೇಲಿನ ಬಡ್ಡಿದರವನ್ನು ಎಲ್ಲಾ ಖಾತೆದಾರರಿಗೆ ಅನ್ವಯಿಸುವಂತೆ ವರ್ಷಕ್ಕೆ  3%ಕ್ಕೆ ಇಳಿಸಲಾಗಿದೆ. " ಎಂದು ಅದು ಹೇಳಿದೆ. ಪ್ರಸ್ತುತ, ಎಸ್‌ಬಿ ಖಾತೆಗಳಲ್ಲಿನ ಬಡ್ಡಿದರವು ಎಸ್‌ಬಿ ಖಾತೆಗಳಲ್ಲಿ 1 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಶೇ 3.25, ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿಗಳಿಗೆ ಶೇ. 3ರಷ್ಟಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  (ಎಸ್‌ಬಿಐ) ಎಲ್ಲಾ ಎಸ್‌ಬಿ ಖಾತೆಗಳಿಗೆ ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಮ್‌ಬಿ) ನಿರ್ವಹಣೆಯನ್ನು ಮನ್ನಾ ಮಾಡಲು ನಿರ್ಧರಿಸಿದೆ."ಎಲ್ಲಾ 44.51 ಕೋಟಿ ಎಸ್‌ಬಿಐ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಎಎಮ್‌ಬಿಯನ್ನು ನಿರ್ವಹಿಸುವ ಶುಲ್ಕವನ್ನು ಈಗ ಮನ್ನಾ ಮಾಡಲಾಗಿದೆ" ಎಂದು ಅದು ಹೇಳಿದೆ.

ಪ್ರಸ್ತುತ, ಎಸ್‌ಬಿಐ ಗ್ರಾಹಕರು ಮೆಟ್ರೊ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 3,000 ರೂ, 2,000 ಮತ್ತು 1,000 ರೂಗಳ ಎಎಮ್‌ಬಿಯನ್ನು ನಿರ್ವಹಿಸಬೇಕಾಗಿದೆ. ಎಎಮ್‌ಬಿಯನ್ನು ನಿರ್ವಹಿಸದಿದ್ದಕ್ಕಾಗಿ 5 ರಿಂದ 15 ರೂ.ಗಳ ದಂಡ ಮತ್ತು ತೆರಿಗೆಯನ್ನು ಬ್ಯಾಂಕ್ ವಿಧಿಸುತ್ತಿತ್ತು

SCROLL FOR NEXT