ವಾಣಿಜ್ಯ

ಪ್ರತಿ ಷೇರಿನ ಬೆಲೆ 10 ರೂ. ನಂತೆ ಯೆಸ್ ಬ್ಯಾಂಕ್ ನ 725 ಕೋಟಿ ಷೇರು ಖರೀದಿಸಲಿರುವ ಎಸ್ ಬಿಐ!

Nagaraja AB

ಮುಂಬೈ: ಪ್ರತಿ ಷೇರಿನ ಬೆಲೆ 10 ರೂ. ನಂತೆ ಯೆಸ್ ಬ್ಯಾಂಕಿನ 725 ಕೋಟಿ ಷೇರುಗಳನ್ನು ಖರೀದಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಹೇಳಿದೆ

ಈ ಪ್ರಸ್ತಾವಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ ಗಳ  ಕೇಂದ್ರಿಯ ಮಂಡಳಿ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಯೆಸ್ ಬ್ಯಾಂಕ್ ಪುನರ್ ರಚನೆಗೆ ಕಳೆದ ವಾರ ರಿಸರ್ವ್ ಬ್ಯಾಂಕ್ ಕರಡು ಯೋಜನೆಯೊಂದನ್ನು ರೂಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ಯೋಜನೆ ಪ್ರಕಾರ  ಪುನರ್ ರಚನೆಯಾಗಲಿರುವ ಬ್ಯಾಂಕ್ ನಲ್ಲಿ 10 ರೂ. ಗೂ ಕಡಿಮೆ ಇರದಂತೆ ಶೇ, 49 ರಷ್ಟು ಷೇರು ಪಾಲುದಾರಿಕೆಯನ್ನು ಹೂಡಿಕೆ ಬ್ಯಾಂಕ್ ಹೊಂದಿರಬೇಕಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿತ್ತು.

ಕರಡು ಯೋಜನೆ ಬಗ್ಗೆ ಬ್ಯಾಂಕ್ ಷೇರುದಾರರು, ಠೇವಣಿದಾರರು ಮತ್ತು  ಗ್ರಾಹಕರು ಸೇರಿದಂತೆ ಸಾರ್ವಜನಿಕ ಸದಸ್ಯರಿಂದ ಅಭಿಪ್ರಾಯಗಳನ್ನು ಕೇಂದ್ರ ಬ್ಯಾಂಕ್ ಆಹ್ವಾನಿಸಿತ್ತು. 

ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಭಾರತದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ಮಂಡಳಿ ನಿರ್ದೇಶಕರನ್ನು ಕಳೆದ ವಾರ ವಜಾಗೊಳಿಸಿದ ಆರ್ ಬಿಐ, ಏಪ್ರಿಲ್ 3ರವರೆಗೂ ಗ್ರಾಹಕರ ವಿತ್ ಡ್ರಾ ಮಿತಿಯನ್ನು ನಿರ್ಬಂಧಿಸಿತ್ತು. ನಾಳೆ ಯೆಸ್ ಬ್ಯಾಂಕ್ ಕರಡು ಪುನರ್  ರಚನೆ ಯೋಜನೆಯನ್ನು  ಕೇಂದ್ರ ಸಂಪುಟ  ಪರಿಗಣಿಸುವ ಸಾಧ್ಯತೆ ಇದೆ.

SCROLL FOR NEXT