ವಾಣಿಜ್ಯ

ಲಾಕ್ ಡೌನ್ ಎಫೆಕ್ಟ್: ಭಾರತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಶೂನ್ಯ ಮಾರಾಟ

Sumana Upadhyaya

ನವದೆಹಲಿ:ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಗೆ ಸಹ ಕೊರೋನಾ ವೈರಸ್ ಲಾಕ್ ಡೌನ್ ತಟ್ಟಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಂದು ಕಾರು ಸಹ ಮಾರಾಟವಾಗಿಲ್ಲ.

ಸರ್ಕಾರದ ಆದೇಶದ ಪ್ರಕಾರ ಕಂಪೆನಿಯ ಎಲ್ಲಾ ಉತ್ಪನ್ನಗಳನ್ನು ಕಳೆದ ತಿಂಗಳು ಕಂಪೆನಿ ಮುಚ್ಚಿತ್ತು. ಬಂದರು ಕಾರ್ಯಾಚರಣೆಯಿಂದಾಗಿ ಮುಂದ್ರಾ ಬಂದರು ಮೂಲಕ 632 ಕಾರುಗಳು ರಫ್ತು ಆಗಿವೆ.

ಎಲ್ಲಾ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸಿ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT