ವಾಣಿಜ್ಯ

ಜಿಯೋದಿಂದ ಹೊಸ ವರ್ಕ್‌ ಫ್ರಮ್‌ ಹೋಮ್ ತ್ರೈಮಾಸಿಕ ಯೋಜನೆ ಪ್ರಕಟ

Shilpa D

ಬೆಂಗಳೂರು: ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್‌ ಫ್ರಮ್‌ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.

ಈ ಹೊಸ ಯೋಜನೆಯು ಜಿಯೋದಿಂದ ಜಿಯೋ ಮತ್ತು ಲ್ಯಾಂಡ್‌ಲೈನ್‌ಗೆ ಉಚಿತ ಮತ್ತು ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡುತ್ತದೆ. ಅಲ್ಲದೆ ಇದರೊಂದಿಗೆ ಜಿಯೋದಿಂದ ಇತರ ಮೊಬೈಲ್‌ಗೆ 3,000 ನಿಮಿಷಗಳ ಕರೆಗಳನ್ನು ಮಾಡುವ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡುತ್ತದೆ ಮತ್ತು ನಿತ್ಯ 3 ಜಿಬಿ ಹೈ-ಸ್ಪೀಡ್ ಡೇಟಾವನ್ನು ಮತ್ತು ನಂತರ 64 ಕೆಬಿಪಿಎಸ್ ನಲ್ಲಿ ಅನಿಯಮಿತ ಡೇಟಾ ಬಳಕೆ ಅವಕಾಶ ಮಾಡಿಕೊಡುತ್ತಿದೆ, ಜೊತೆಗೆ ಬಳಕೆದಾರರಿಗೆ ಜಿಯೋ ಆಪ್ಸ್‌ ಗಳನ್ನು ಉಚಿತವಾಗಿ ಬಳಕೆ ಮಾಡುವ ಅವಕಾಶವನ್ನು ನೀಡುತ್ತಿದೆ. 

ಲಾಕ್‌ಡೌನ್ ಆದಾಗಿನಿಂದಲೂ ಹೆಚ್ಚಿನ ಮಂದಿ ವರ್ಕ್‌ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ವೇಗದ ಡೇಟಾದ ಅಗತ್ಯವು ಹೆಚ್ಚಾಗಿದೆ. ಇದರೊಂದಿಗೆ ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಮನರಂಜನೆಗಾಗಿ ಹುಡುಕುತ್ತಿದ್ದಾರೆ. ಈ ಅಗತ್ಯವನ್ನು ಪರಿಗಣಿಸಿ, ಜಿಯೋ ಈ ಹೊಸ ವರ್ಕ್‌ ಫ್ರಮ್ ಹೋಮ್ ತ್ರೈಮಾಸಿಕ ಪ್ಲಾನ್ ಅನ್ನು ಲಾಂಚ್ ಮಾಡಿದ್ದಾರೆ.

ರಿಲಯನ್ಸ್ ಜಿಯೋ 999 ರೂ. ಪ್ರಿಪೇಯ್ಡ್ ಪ್ಯಾಕ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 3GB ಡೇಟಾ ದೊರೆಯಲಿದ್ದು, ಅಂದರೆ ಒಟ್ಟಾರೆ 252 ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಾಗುತ್ತದೆ. ಮತ್ತೆ ಜಿಯೋದಿಂದ ಜಿಯೋ ಅನಿಯಮಿತ ಕರೆ ಮಾತ್ರವಲ್ಲದೆ, ಇತರ ನೆಟ್‌ವರ್ಕ್‌ಗೂ 3,000 ನಿಮಿಷಗಳ ಕರೆ ಪ್ರಯೋಜನ ನೀಡಲಾಗಿದೆ. ಜತೆಗೆ ಜಿಯೋ ಸೇವೆಗಳಿಗೆ ಉಚಿತ ಪ್ರವೇಶ, ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ.

SCROLL FOR NEXT