ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಶೇ.13ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದೆ.
ಕಂಪನಿಯಲ್ಲಿ ಸುಮಾರು 4,000 ಉದ್ಯೋಗಿಗಳು ವಿವಿಧ ಹುದ್ದೆಗಳಲ್ಲಿದ್ದು ಅದರಲ್ಲಿ 520 ಉದ್ಯೋಗಿಗಳನ್ನು ಕೆಲಸದಿಂಡ ತೆಗೆದುಹಾಕಲು ಜೊಮಾಟೋ ತೀರ್ಮಾನಿಸಿದೆ.
ಈ ಕುರಿತಂತೆ ಜೊಮಾಟೋ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಯ ವ್ಯವಹಾರದ ಹಲವು ಅಂಶಗಳು ಕಳೆದ ಎರಡು ತಿಂಗಳುಗಳಲ್ಲಿ ಗಮನಾರ್ಹವಾಗಿ ಬದಲಾಗಿವೆ ಮತ್ತು ಈ ಹಲವು ಬದಲಾವಣೆಗಳು ಶಾಶ್ವತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎಂದು ಬ್ಲಾಗ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
"ನಾವು ಜೊಮಾಟೋವನ್ನು ಕೇಂದ್ರೀಕೃತ ಕಂಪನಿಯಾಗಿ ನಿರ್ಮಿಸುವುದನ್ನು ಮುಂದುವರಿಸುತ್ತಿದ್ದರೂ, ನಮ್ಮ ಎಲ್ಲ ಉದ್ಯೋಗಿಗಳಿಗೆ ಸಾಕಷ್ಟು ಉದ್ಯೋಗವಿದೆ ಎಂದು ಹೇಳಲು ಬರುವುದಿಲ್ಲ. ನಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸವಾಲಿನ ವಾತಾವರಣದಲ್ಲಿ ಕೆಲಸ ನಿರ್ವಹಿಸುವುದನ್ನು ತರಬೇತಿ ನೀಡಬೇಕಿದೆ. ಆದರೆ ನಮ್ಮ ಒಟ್ತಾರೆ ಉದ್ಯೋಗಿಗಳ ಪೈಕಿ ಶೇಕಡಾ 13 ರಷ್ಟು ಜನರಿಗೆ ಅಂತಹಾ ಸವಾಲಿನ ವಾತಾವರಣದ ಕೆಲಸ ನೀಡಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಯಾರಿಗೆ ಈ ಆದೇಶದಿಂದ ಪರಿಣಾಮ ಬೀರಬಹುದೋ ಅವರಿಗೆ ಮುಂದಿನ 24 ಗಂಟೆಗಳಲ್ಲಿ ಲೀಡರ್ ಶಿಪ್ ಟೀಂ ನೊಂದಿಗೆ ಸಂಪರ್ಕಿಸಲು ಕರೆ ಬರುತ್ತದೆ."
ಕೆಲಸದಿಂದ ಹೊರನಡೆಯಬಹುದಾದ ಉದ್ಯೋಗಿಗಳು ಸಿಒಒ ಮತ್ತು ಸಹ-ಸಂಸ್ಥಾಪಕ ಗೌರವ್ ಗುಪ್ತಾ ಮತ್ತು ಸಿಇಒ ಫುಡ್ ಡೆಲಿವರಿ ಮೋಹಿತ್ ಗುಪ್ತಾ ಅವರೊಂದಿಗೆ ಮುಂದಿನ ಎರಡು ದಿನಗಳಲ್ಲಿ ವೀಡಿಯೊ ಕರೆ ಸ್ವೀಕರಿಸಲಿದ್ದಾರೆ ಎಂದು ಗೋಯಲ್ ಹೇಳಿದರು. ಈ ಉದ್ಯೋಗಿಗಳಿಗೆ ಆರ್ಥಿಕ ಸಹಾಯದ ಕುರಿತು ಮಾತನಾಡಿದ ಅವರು ಜೊಮಾಟೊದಲ್ಲಿ ಇನ್ನು ಮುಂದೆ ಯಾವುದೇ ಕೆಲಸವಿಲ್ಲದ ನಮ್ಮ ಎಲ್ಲ ಉದ್ಯೋಗಿಗಳು ಮುಂದಿನ 6 ತಿಂಗಳವರೆಗೆ ಶೇಕಡಾ 50 ರಷ್ಟು ಸಂಬಳವನ್ನು ತಮ್ಮೊಂದಿಗೆ ಒಯ್ಯಲಾಗಿದ್ದಾರೆ.ಹಾಗಾಗದೆ ಹೋದಲ್ಲಿ ಅವರಿಗೆ ಬೇರೆ ಕೆಲಸ ದೊರಕುವವರೆಗೆ ಅವರ ದಿನನಿತ್ಯದ ಜೀವನದ ಖರ್ಚು ನೋಡಿಕೊಳ್ಳುವುದಾಗಿ ಸಹ ಕಂಪನಿ ಹೇಳೀದೆ. ಇದಲ್ಲದೆ ಕಂಪನಿಯಲ್ಲಿದ್ದು ವೇತನ ಕಡಿತ ಒಪ್ಪಂದಕ್ಕೆ ಸಹಿ ಹಾಕಿರುವ ನೌಕರರಿಗೆ ಗೋಯಲ್ ಧನ್ಯವಾದವನ್ನು ತಿಳಿಸಿದ್ದಾರೆ..