ವಾಣಿಜ್ಯ

ವಾಟ್ಸ್ ಆಪ್ ಮೂಲಕವೂ ಎಲ್ ಪಿಜಿ ಬುಕ್ ಮಾಡಬಹುದು: ಇಲ್ಲಿದೆ ಪೂರ್ಣ ಮಾಹಿತಿ

Srinivas Rao BV

ನ.1 ರಿಂದ ಎಲ್ ಪಿಜಿ ಬುಕಿಂಗ್ ನಲ್ಲಿ ಹಲವು ಬದಲಾವಣೆಗಳಾಗಿದ್ದು, ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆಯಾಗಿದೆ.

ವಾಟ್ಸ್ ಮೂಲಕವೂ ಗ್ಯಾಸ್ ಬುಕ್ ಮಾಡುವ ಸೌಲಭ್ಯ ಜಾರಿಗೆ ತರಲಾಗಿದ್ದು, ವಾಟ್ಸ್ ಆಪ್ ಮೂಲಕ ಸಿಲೆಂಡರ್ ಗಳನ್ನು ಬುಕ್ಕಿಂಗ್ ಮಾಡುವ ಬಗ್ಗೆ ಮಾಹಿತಿ ಹೀಗಿದೆ.

5 ವಿವಿಧ ರೀತಿಗಳಲ್ಲಿ ಸಿಲೆಂಡರ್ ಬುಕ್ ಮಾಡಲು ಅವಕಾಶವಿದೆ.

1. ಗ್ಯಾಸ್ ಏಜೆನ್ಸಿ ಡಿಸ್ಟ್ರಿಬ್ಯೂಟರ್ ಮೂಲಕ ಬುಕ್ ಮಾಡಬಹುದಾಗಿದೆ.

2. ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಿಲೆಂಡರ್ ಬುಕ್ ಮಾಡಬಹುದಾಗಿದೆ.

3. ಆನ್ ಲೈನ್ ಮೂಲಕ https://iocl.com/Products/Indanegas.aspx ಬುಕ್ಕಿಂಗ್ ಮಾಡಬಹುದಾಗಿದೆ.

4. ಸಂಸ್ಥೆಯ ವಾಟ್ಸ್ ಆಪ್ ನಂಬರ್ ಗೆ ಟೆಕ್ಸ್ಟ್ ಮಾಡುವ ಮೂಲಕ ವಾಟ್ಸ್ ಆಪ್ ನಲ್ಲಿ ಬುಕ್ ಮಾಡಬಹುದಾಗಿದೆ.

5.ಇಂಡೇನ್ ಆಪ್ ಮೂಲಕ ಬುಕ್ಕಿಂಗ್ 

ವಾಟ್ಸ್ ಆಪ್ ಬುಕ್ಕಿಂಗ್ ಬಗ್ಗೆ ಮಾಹಿತಿ ಹೀಗಿದೆ.

7718955555 ನಂಬರ್ ಮೂಲಕ ಇಂಡೇನ್ ಗ್ರಾಹಕರು ಎಲ್ ಪಿಜಿ ಬುಕ್ ಮಾಡಬಹುದಾಗಿದ್ದು, ವಾಟ್ಸ್ ಆಪ್ ಮೂಲಕ ಬುಕ್ ಮಾಡುವುದಕ್ಕೂ ಇದೇ ನಂಬರ್ ಬಳಕೆ ಮಾಡಬಹುದಾಗಿದೆ.

ವಾಟ್ಸ್ ಆಪ್ ನಲ್ಲಿ REFILL ಎಂದು ಟೈಪ್ ಮಾಡಿ ನೋಂದಾಯಿತ ನಂಬರ್ ಮೂಲಕವೇ ವಾಟ್ಸ್ ಆಪ್ ಮೆಸೇಜ್ ಕಳಿಸಿ ಬುಕ್ ಮಾಡಬಹುದಾಗಿದೆ. ದೃಢೀಕರಣ ಕೋಡ್ ನ್ನು ಎಸ್ಎಂಎಸ್ ಮೂಲಕ ಕಳಿಸಬಹುದಾಗಿದೆ. ಡೆಲಿವರಿ ವ್ಯಕ್ತಿಗೆ ಒಟಿಪಿಯನ್ನು ನೀಡಿದ ಬಳಿಕಷ್ಟೇ ಸಿಲಿಂಡರ್ ಸಿಗಲಿದೆ.

SCROLL FOR NEXT