ವಾಣಿಜ್ಯ

ಆಹಾರ ಪದಾರ್ಥಗಳು ದುಬಾರಿ: ಸೆಪ್ಟೆಂಬರ್ ನಲ್ಲಿ ಸಗಟು ಹಣದುಬ್ಬರ ಶೇ. 1.32 ರಷ್ಟು ಏರಿಕೆ

Lingaraj Badiger

ನವದೆಹಲಿ: ಪ್ರಮುಖವಾಗಿ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ದುಬಾರಿಯಾದ ಪರಿಣಾಮ ಸೆಪ್ಟೆಂಬರ್ ನಲ್ಲಿ ಸಗಟು ಬೆಲೆ ಆಧರಿಸಿದ ಹಣದುಬ್ಬರವು ಶೇ. 1.32ರಷ್ಟು ಏರಿಕೆಯಾಗಿದೆ.

ತಿಂಗಳ ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ಸೆಪ್ಟೆಂಬರ್ 2020ರಲ್ಲಿ 1.32ಕ್ಕೆ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ ಸಗಟು ಹಣದುಬ್ಬರ ಶೇ. 0.33 ರಷ್ಟು ಇತ್ತು ಎಂದು ಬುಧವಾರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಆಗಸ್ಟ್ ನಲ್ಲಿ ಶೇ 0.16 ರಷ್ಟು ಇದ್ದ ಸಗಟು ಹಣದುಬ್ಬರವು ಸೆಪ್ಟೆಂಬರ್ ನಲ್ಲಿ 1.32ಕ್ಕೆ ಏರಿಕೆಯಾಗಿದೆ.

ಇನ್ನು ತಯಾರಿಕಾ ಸರಕುಗಳ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ ಶೇ. 36.54ಕ್ಕೆ ಏರಿಕೆಯಾಗಿದೆ. ಆಲೂಗಡ್ಡೆ ದರ ಶೇ. 107.63ರಷ್ಟು ಹೆಚ್ಚಾಗಿದೆ. ಈರುಳ್ಳಿ ದರ ಶೇ. 31.64ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

SCROLL FOR NEXT