ವಾಣಿಜ್ಯ

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಸತತ ನಾಲ್ಕನೆ ದಿನವೂ ಚಿನ್ನದ ದರ ಕುಸಿತ

Vishwanath S

ನವದೆಹಲಿ: ಭಾರತದಲ್ಲಿ ಹಳದಿ ಲೋಹದ ಬೆಲೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದೆ. 

ಶುಕ್ರವಾರ 24 ಕ್ಯಾರೆಟ್ ಚಿನ್ನದ ಮೇಲೆ 485 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂ ಚಿತ್ರದ ಬೆಲೆ 50,418 ರುಪಾಯಿಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಇನ್ನು ಬೆಳ್ಳಿ ಬೆಲೆಯಲ್ಲಿ ಬಾರಿ ಇಳಿಕೆ ಕಂಡಿದೆ. 2,081 ರುಪಾಯಿ ಇಳಿಕೆಯಾಗಿದ್ದು 1 ಕೆಜಿ ಬೆಳ್ಳಿಯ ಬೆಲೆ 58,099 ರುಪಾಯಿಗೆ ತಲುಪಿದೆ. 

SCROLL FOR NEXT