ವಾಣಿಜ್ಯ

ಆರ್ಥಿಕ ಪುನಶ್ಚೇತನಕ್ಕೆ ಕೊರೋನಾ ಎರಡನೇ ಅಲೆ ಬಹುದೊಡ್ಡ ಅಪಾಯಕಾರಿ: ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ 

Sumana Upadhyaya

ನವದೆಹಲಿ: ಕೋವಿಡ್-19 ಎರಡನೇ ಅಲೆ ಭುಗಿಲೆದ್ದಿರುವುದು ಭಾರತದ ಆರ್ಥಿಕ ಪುನಶ್ಚೇತನಕ್ಕೆ ಬಹುದೊಡ್ಡ ಅಪಾಯಕಾರಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರು ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ ಇತ್ತೀಚಿನ ವಿತ್ತೀಯ ಸಭೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಪ್ರತಿದಿನ ಹೊಸ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಸ್ಥಳೀಯ ಮಟ್ಟದಲ್ಲಿ ಮಿನಿ ಲಾಕ್‌ಡೌನ್ ಹೇರಲಾಗುತ್ತಿದೆ, ಇದರಿಂದ ವ್ಯಾಪಾರ-ವಹಿವಾಟು ಸಂಪರ್ಕ-ತೀವ್ರ ವಲಯಗಳ ಬೇಡಿಕೆಯನ್ನು ಕುಂಠಿತಗೊಳಿಸುತ್ತದೆ, ನಿಧಾನ ಬಳಕೆ ಬೇಡಿಕೆ ಮತ್ತು ದೊಡ್ಡ ಹೂಡಿಕೆಗಳು, ಬೆಳವಣಿಗೆಯನ್ನು ತಡೆಯುತ್ತದೆ ಎಂದು ವಿತ್ತೀಯ ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಬೇಡಿಕೆಗಳ ಪರಿಸ್ಥಿತಿಯನ್ನು ಸುಧಾರಿಸುವುದು, ಸರ್ಕಾರದಿಂದ ಹೂಡಿಕೆಯ ವರ್ಧನೆಯ ಕ್ರಮಗಳು ಬೆಳವಣಿಗೆಯ ನಿರೀಕ್ಷೆಗಳನ್ನು ಹುಸಿಮಾಡಿವೆ. ದೇಶಲ್ಲಿ ಕೋವಿಡ್-19 ಸೋಂಕಿನ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿದೆ, ಇಂತಹ ಸಂದರ್ಭದಲ್ಲಿ ಕಳೆದ ವರ್ಷ ಲಾಕ್ ಡೌನ್ ನಂತರ ತೀವ್ರ ಕುಸಿತ ಕಂಡ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಬಹುದೊಡ್ಡ ಸವಾಲಾಗಿದೆ. ಆರ್ಥಿಕ ಚೇತರಿಕೆಯನ್ನು ಪರಿಣಾಮಕಾರಿಯಾಗಿ ಭದ್ರಪಡಿಸುವುದು ಈ ಹೊತ್ತಿನ ಅಗತ್ಯವಾಗಿದ್ದು, ಈ ಮೂಲಕ ದೀರ್ಘ ಕಾಲಕ್ಕೆ ವಿಸ್ತಾರವಾಗಿ ಆರ್ಥಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ಸಾಲಿನ ತ್ರೈಮಾಸಿಕ ವಿತ್ತೀಯ ಸಭೆಯಲ್ಲಿ ರೆಪೊ ದರ ಮತ್ತು ರಿವರ್ಸ್ ರೆಪೊ ದರವನ್ನು ಬದಲಾಯಿಸದೆ ಕಳೆದ ಆರ್ಥಿಕ ಸಾಲಿನ ಕೊನೆಯ ತ್ರೈಮಾಸಿಕದಷ್ಟೇ ಇರಿಸಿದೆ. ಚಿಲ್ಲರೆ ಹಣದುಬ್ಬರ ಮತ್ತು ಕೊರೋನಾ ಎರಡನೇ ಅಲೆ ಎದ್ದ ನಂತರ ಉಂಟಾಗಿರುವ ಆರ್ಥಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಆರ್ ಬಿಐ ಈ ನಿರ್ಧಾರಕ್ಕೆ ಬಂದಿದೆ. 2021-22ನೇ ಸಾಲಿನಲ್ಲಿ ಹಣದುಬ್ಬರ ದರವನ್ನು ಶೇಕಡಾ 5ರಷ್ಟು ಆರ್ ಬಿಐಯ ವಿತ್ತೀಯ ನೀತಿ ಸಮಿತಿ ಸದಸ್ಯರು ಅಂದಾಜು ಮಾಡಿದ್ದಾರೆ.

SCROLL FOR NEXT