ವಾಣಿಜ್ಯ

ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ 'ಡಿಮಾರ್ಟ್‌'ನ ರಾಧಾಕಿಶನ್ ದಮಾನಿ

Lingaraj Badiger

ನವದೆಹಲಿ: ದೇಶದ ಪ್ರಮುಖ ರೀಟೇಲ್ ಕಂಪನಿ ಡಿಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಅವರು ಈಗ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಧಾಕಿಶನ್ ದಮಾನಿ ಅವರು ಪ್ರಸ್ತುತ 19.2 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 98ನೇ ಸ್ಥಾನದಲ್ಲಿದ್ದಾರೆ. 2021 ರಲ್ಲಿ ದಮಾನಿ ಅವರ ಸಂಪತ್ತು  4.3 ಬಿಲಿಯನ್ ಡಾಲರ್ ಅಥವಾ ಶೇ. 29 ರಷ್ಟು ಹೆಚ್ಚಾಗಿದೆ.

ಕಳೆದ ವರ್ಷ 16.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 117ನೇ ಸ್ಥಾನದಲ್ಲಿದ್ದ ರಾಧಾಕಿಶನ್ ದಮಾನಿ ಅವರು ಈ ವರ್ಷ ಟಾಪ್ 100 ಬಿಲಿಯನೇರ್‌ ಗಳ ಕ್ಲಬ್ ಸೇರಿದ್ದಾರೆ.

ಭಾರತದ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಅಜೀಂ ಪ್ರೇಮ್‌ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ ನಾಡಾರ್, ಲಕ್ಷ್ಮಿ ಮಿತ್ತಲ್ ಅವರು ಸಹ ವಿಶ್ವದ ಅಗ್ರ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಧಾಕಿಶನ್ ದಮಾನಿ ಅವರು ಬಿಲಿಯನೇರ್ ಹೂಡಿಕೆದಾರ, ಕಡಿಮೆ ಬೆಲೆಯ ಗ್ರಾಹಕ ಸರಕುಗಳಲ್ಲಿ ಪರಿಣತಿ ಹೊಂದಿರುವ ಮುಂಬೈ ಮೂಲದ ರಿಟೇಲ್ ವ್ಯಾಪಾರಿಯಾಗಿದ್ದಾರೆ. ದಮಾನಿ ಅವರು ಅವೆನ್ಯೂ ಸೂಪರ್‌ಮಾರ್ಟ್ಸ್ ಅನ್ನು ಹೊಂದಿದ್ದು. ಅವೆನ್ಯೂ ಸೂಪರ್ಮಾರ್ಕೆಟ್ ಗಳು ಭಾರತದಾದ್ಯಂತ 200ಕ್ಕೂ ಹೆಚ್ಚು ಡಿಮಾರ್ಟ್ ಅಂಗಡಿಗಳಲ್ಲಿ ಆಹಾರ, ಬಟ್ಟೆ ಮತ್ತು ಇತರ ಗ್ರಾಹಕ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ.

SCROLL FOR NEXT