ವಾಣಿಜ್ಯ

ಝೀ ಎಂಟರ್ಟೇನ್ಮೆಂಟ್ ಮತ್ತು ಸೋನಿ ಪಿಕ್ಚರ್ಸ್ ವಿಲೀನ ಒಪ್ಪಂದಕ್ಕೆ ಸಹಿ: ಎಂಡಿ ಆಗಿ ಝೀ ಸಿಇಒ ಪುನೀತ್ ಗೋಯೆಂಕಾ ನೇಮಕ

Harshavardhan M

ನವದೆಹಲಿ: ದೇಶದ ಜನಪ್ರಿಯ ಟಿವಿ ಮನರಂಜನಾ ಸಂಸ್ಥೆಗಳಾದ ಸೋನಿ ಮತ್ತು ಝೀ ನೆಟ್ವರ್ಕ್ ಇಂದು ವಿಲೀನ ಒಪ್ಪಂದಕ್ಕೆ ಸಹಿ ಹಾಕಿವೆ. ಸೆಪ್ಟೆಂಬರ್ ತಿಂಗಳಲ್ಲೇ ಈ ಸಂಬಂಧ ಮಾಹಿತಿ ಹೊರಬಿದ್ದಿತ್ತು. 

ಒಪ್ಪಂದದಂತೆ ವಿಲೀನದ ನಂತರ ಸೋನಿ ನೆಟ್ವರ್ಕ್ ಸಂಸ್ಥೆ ಶೇ.52.93 ಪ್ರತಿಶತ ಪಾಲನ್ನು ಹೊಂದಿದರೆ, ಝೀ ಸಂಸ್ಥೆ ಶೇ. 47.07 ಪಾಲನ್ನು ಹೊಂದಲಿದೆ. 

ವಿಲೀನಗೊಂಡ ನಂತರ ಇಡೀ ಸಂಸ್ಥೆಯ ನೇತೃತ್ವವನ್ನು ಝೀ ಸಂಸ್ಥೆಯ ಸಿಇಒ ಪುನೀತ್ ಗೋಯೆಂಕಾ ಅವರು ಮುನ್ನಡೆಸಲಿದ್ದಾರೆ. ಅವರು ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ ಅಲಂಕರಿಸಲಿದ್ದಾರೆ.

SCROLL FOR NEXT