ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಡಿ.30ಕ್ಕೆ ರಾಜ್ಯದ ಹಣಕಾಸು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 30 ರಂದು ರಾಜ್ಯಗಳ ಹಣಕಾಸು ಸಚಿವರೊಂಜಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 30 ರಂದು ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 30 ರಂದು ರಾಜ್ಯಗಳ ಹಣಕಾಸು ಸಚಿವರೊಂಜಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 30 ರಂದು ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ನಡೆದ ಇತರಕ್ಕಿಂತ ಭಿನ್ನವಾಗಿ ಇದು ಭೌತಿಕ ಸಭೆಯಾಗಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ಕೊನೆಯ ವಾರದಲ್ಲಿ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಫೆಬ್ರವರಿ 1 ರಂದು ಬಜೆಟ್ 2022-23 ಅನ್ನು ಮಂಡಿಸುವ ಸಾಧ್ಯತೆಯಿದೆ.

ಸೀತಾರಾಮನ್ ಅವರು ಕೈಗಾರಿಕೆಗಳ ಪಾಲುದಾರರು, ಹಣಕಾಸು ವಲಯದ ಹೂಡಿಕೆದಾರರು,  ಕಾರ್ಮಿಕ ಸಂಘಟನೆಗಳು, ಕೃಷಿಕರು ಮತ್ತು ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಸಭೆಗಳನ್ನು ನಡೆಸಿದ್ದು, ತರ್ಕಬದ್ಧ  ಆದಾಯ ತೆರಿಗೆ ಸ್ಲ್ಯಾಬ್‌, ಡಿಜಿಟಲ್ ಸೇವೆಗಳಿಗೆ ಮೂಲಸೌಕರ್ಯ ಮತ್ತಿತರ ಸಲಹೆಗಳನ್ನು ಪಡೆದಿದ್ದಾರೆ.  ಡಿಸೆಂಬರ್ 15 ಮತ್ತು ಡಿಸೆಂಬರ್ 22 ರ ನಡುವೆ ಅಂತಹ ಎಂಟು ಸಭೆಗಳನ್ನು ನಡೆಸಲಾಗಿದೆ ಎಂದು ಕಳೆದ ವಾರ ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ನಿಗದಿಪಡಿಸಲಾದ ಎಂಟು ಸಭೆಗಳಲ್ಲಿ ಏಳು ಪಾಲುದಾರ ಗುಂಪುಗಳನ್ನು ಪ್ರತಿನಿಧಿಸುವ 120 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದಾರೆ ಎಂದು ಅದು ಹೇಳಿದೆ. ಇದು ಮೋದಿ 2.0 ಸರ್ಕಾರ ಮತ್ತು ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Toxic: ಭರ್ಜರಿ ಓಪನಿಂಗ್, ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್, ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!