ವಾಣಿಜ್ಯ

ಕೋವಿಡ್ ಸಾಂಕ್ರಾಮಿಕದ ನಡುವೆ ಟಿಸಿಎಸ್ ನಿಂದ 40 ಸಾವಿರ ಉದ್ಯೋಗಾವಕಾಶ!

Srinivasamurthy VN

ಬೆಂಗಳೂರು: ಭಾರತದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) 2021-22ರ ಆರ್ಥಿಕ ವರ್ಷದಲ್ಲಿ ದೇಶದ ಕ್ಯಾಂಪಸ್‌ ಸೆಲೆಕ್ಷನ್ ಗಳಿಂದ 40,000 ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ಕುರಿತಂತೆ ಸಂಸ್ಥೆಯ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ ಶುಕ್ರವಾರ ತಿಳಿಸಿದ್ದು, '5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿರುವ ಖಾಸಗಿ ವಲಯದ ಅತಿದೊಡ್ಡ ಉದ್ಯೋಗದಾತ ಕಂಪನಿ ಟಿಸಿಎಸ್ ಯು ಕಳೆದ ವರ್ಷ ಕ್ಯಾಂಪಸ್‌ಗಳಿಂದ 40,000 ಪದವೀಧರರನ್ನು ನೇಮಕ ಮಾಡಿಕೊಂಡಿತ್ತು. ಹಾಲಿ ವರ್ಷ, ಆ  ಸಂಖ್ಯೆಯಲ್ಲಿ ಉತ್ತಮ ಸಾಧನೆ ಮಾಡಲಿದೆ. ಅದಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಅದರ ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳ ನಡುವೆಯೂ ನೇಮಕಾತಿಲ್ಲಿ ಯಾವುದೇ ತೊಂದರೆ ಅಥವಾ ತಡೆ ಉಂಟಾಗುವುದಿಲ್ಲ ಎಂದು ಅವರು ಹೇಳಿದ್ದು, ಕಳೆದ ವರ್ಷ ಒಟ್ಟು 3.60 ಲಕ್ಷ ಫ್ರೆಷರ್‌ಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಭಾರತದ ಕ್ಯಾಂಪಸ್‌ನಿಂದ, ನಾವು ಕಳೆದ ವರ್ಷ 40,000  ಜನರನ್ನು ನೇಮಿಸಿಕೊಂಡಿದ್ದೇವೆ. ಈ ವರ್ಷ ಭಾರತದಲ್ಲಿ 40,000 ಅಥವಾ ಅದಕ್ಕಿಂತ ಹೆಚ್ಚಿನವರನ್ನು ನೇಮಕ ಮಾಡಿಕೊಳ್ಳುತ್ತೇವೆ ಮತ್ತು ನೇಮಿಸಿಕೊಳ್ಳುತ್ತೇವೆ ಎಂದು ಲಕ್ಕಾಡ್ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT