ವಾಣಿಜ್ಯ

ಖಾಸಗೀಕರಣಕ್ಕೆ ಸಿದ್ಧಗೊಂಡಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ವಿಆರ್ ಎಸ್ ಸೌಲಭ್ಯ ಸಾಧ್ಯತೆ

Srinivas Rao BV

ನವದೆಹಲಿ: ಸರ್ಕಾರದಿಂದ ಖಾಸಗೀಕರಣಕ್ಕೆ ಪ್ರಸ್ತಾವನೆ ಇರುವ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಆಕರ್ಷಕ ಸ್ವಯಂ ನಿವೃತ್ತಿ ಸೇವೆ ಯೋಜನೆ (ವಿಆರ್ ಎಸ್) ಸೌಲಭ್ಯ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೆಚ್ಚುತ್ತಿರುವ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ವಿಆರ್ ಎಸ್ ನ ಸೌಲಭ್ಯ ನೀಡುವ ಚಿಂತನೆ ನಡೆದಿದೆ. ಫೆ.1 ರಂದು 2021-22 ನೇ ಸಾಲಿನ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ ಗಳನ್ನು ಖಾಸಗಿಕರಣಗೊಳಿಸುವುದನ್ನು ಘೋಷಿಸಿದ್ದರು.

ಈಗ ಖಾಸಗೀಕರಣಕ್ಕೂ ಮುನ್ನ ಆಕರ್ಷಕ ವಿಆರ್ ಎಸ್ ನೀಡಿದರೆ ಅದು ಖಾಸಗಿಯವರಿಗೆ ತಕ್ಕಂತೆ ಇರುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಮೂಲಗಳು ಹೇಳಿವೆ. 

ವಿಆರ್ ಎಸ್ ಒತ್ತಾಯದ ಮೇರೆಗೆ ನೀಡಲಾಗುತ್ತಿಲ್ಲ. ಆದರೆ ಅದನ್ನು ಆಕರ್ಷಕ ಆರ್ಥಿಕ ಪ್ಯಾಕೇಜ್ ನ್ನು ಪಡೆದು ಸ್ವಯಂ ನಿವೃತ್ತಿಗೆ ಒಪ್ಪುವವರಿಗಾಗಿ ಆಯ್ಕೆಯನ್ನಾಗಿ ನೀಡಲಾಗುತ್ತಿದೆ. ಈ ಹಿಂದೆಯೂ ಪಿಎಸ್ ಬಿ ಗಳ ವಿಲೀನದ ಸಂದರ್ಭದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು 

ಖಾಸಗೀಕರದ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಲು ಅರ್ಹರನ್ನು ಗುರುತಿಸುವ ಕೆಲಸವನ್ನು ನೀತಿ ಆಯೋಗಕ್ಕೆ ವಹಿಸಲಾಗಿದ್ದು, ಕೆಲವು ಹೆಸರುಗಳನ್ನು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಉನ್ನತ ಸಮಿತಿಗೆ ಕಳಿಸಿಕೊಟ್ಟಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣಕ್ಕೆ ತೆಗೆದುಕೊಂಡಿರುವ ಹೆಸರುಗಳ ಪೈಕಿ ಇವೆ.

SCROLL FOR NEXT