ವಾಣಿಜ್ಯ

ಕೊರೋನೋತ್ತರ ಉದ್ಯಮ ಎಂದಿನಂತೆ ಇರುವುದಿಲ್ಲ, ಸುಧಾರಣೆಗಳು ಅಗತ್ಯ: ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್

Srinivas Rao BV

ಔರಂಗಾಬದ್: ಕೋವಿಡ್-19 ಸಾಂಕ್ರಾಮಿಕದ ನಂತರದ ದಿನಗಳಲ್ಲಿ ಉದ್ಯಮ ಎಂದಿನಂತೆ ಇರುವುದಿಲ್ಲ ಉದ್ಯಮ ಸರಳೀಕರಣದಲ್ಲಿ ಇನ್ನಷ್ಟು ಸರಳತೆಯನ್ನು ತರುವ ಅಗತ್ಯವಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಈಗಿರುವ ಒಂದಷ್ಟು ನಿಯಮಗಳನ್ನು ತೆಗೆದುಹಾಕಬೇಕೆಂದು ಹೇಳಿರುವ ಅಮಿತಾಬ್ ಕಾಂತ್ 

ಔರಂಗಾಬಾದ್ ಇಂಡಸ್ಟ್ರಿಯಲ್ ಸಿಟಿ ಹಾಗೂ ಮರಾಠವಾಡ ಆಟೋ ಕ್ಲಸ್ಟರ್ ಗೆ ಭೇಟಿ ನೀಡಿ ಮಾತನಾಡಿದ ಅವರು ಸಾಂಕ್ರಾಮಿಕೋತ್ತರ ಉದ್ಯಮಗಳು ಎಂದಿನಂತೆ ಇರುವುದಿಲ್ಲ, ಕೋವಿಡ್ ನಂತರದ ದಿನಗಳಲ್ಲಿ ಸಾಧ್ಯವಾದಷ್ಟೂ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಹೇಳಿದ್ದಾರೆ. 

ನಾವು ಈಗಾಗಲೇ ಹಲವು ನಿಯಮಗಳು, ನಿಯಂತ್ರಣಗಳು, ಪ್ರಕ್ರಿಯೆಗಳನ್ನು ಜಾರಿಗೆ ತರಲಾಗಿದೆ. ಇವುಗಳನ್ನು ತೆಗೆದುಹಾಕುವುದರಿಂದ ನಾವು ಉದ್ಯಮ ಸ್ನೇಹಿ ವಾತಾವರಣದಲ್ಲಿ ಮತ್ತಷ್ಟು ಸರಳೀಕರಣ ಜಾರಿಗೆ ತರಬೇಕಾಗಿದೆ ಎಂದು ನೀತಿ ಆಯೋಗದ ಸಿಇಒ ಹೇಳಿದ್ದಾರೆ. ಇದೇ ವೇಳೆ ದೇಶ ತಂತ್ರಜ್ಞಾನದಲ್ಲಿಯೂ ಬೆಳವಣಿಗೆ ಸಾಧಿಸಬೇಕಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT