ವಾಣಿಜ್ಯ

ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.3 ರಷ್ಟು ಏರಿಕೆ!

Srinivas Rao BV

ನವದೆಹಲಿ: ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.3 ರಷ್ಟು ಏರಿಕೆಯಾಗಿದೆ. ಆರ್ ಬಿಐ ನ ಕಂಫರ್ಟ್ ಮಟ್ಟವನ್ನು ಮೀರಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದ್ದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ. 

ರಾಷ್ಟ್ರೀಯ ಅಂಕಿಅಂಶಗಳ ಕಛೇರಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ  ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಏಪ್ರಿಲ್ ನಲ್ಲಿ ಶೇ.4.23 ರಷ್ಟು ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಹಣದುಬ್ಬರ ಶೇ.5.01 ರಷ್ಟು ಏರಿಕೆಯಾಗಿದ್ದು ಏಪ್ರಿಲ್ ತಿಂಗಳಿಗಿಂತ ಶೇ.1.96 ರಷ್ಟು ಏರಿಕೆಯಾಗಿದೆ. 

ಚಿಲ್ಲರೆ ಹಣದುಬ್ಬರ ದರವನ್ನು ಶೇ.4 ರಷ್ಟರಲ್ಲಿ ಇರಿಸುವುದಕ್ಕೆ ಸರ್ಕಾರ ಆರ್ ಬಿಐಗೆ ಸೂಚನೆ ನೀಡಿದೆ. 

2021-22 ಅವಧಿಯಲ್ಲಿ ಕೇಂದ್ರ ಬ್ಯಾಂಕ್ ಸಿಪಿಐ ಹಣದುಬ್ಬರ ಶೇ.5.1 ರಷ್ಟಿರಲಿದೆ ಎಂದು ಅಂದಾಜಿಸಿತ್ತು, ಮೊದಲ ತ್ರೈಮಾಸಿಕದಲ್ಲಿ ಶೇ.5.2 ರಷ್ಟು, ಎರಡನೇ ತ್ರೈಮಾಸಿಕದಲ್ಲಿ ಶೇ.5.4 ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇ.4.7 ರಷ್ಟು, ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.3 ರಷ್ಟಿರಲಿದೆ ಎಂದು ಹೇಳಿತ್ತು. 
 

SCROLL FOR NEXT