ವಾಣಿಜ್ಯ

ಎರಡು ದಿನಗಳ ನಂತರ ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ: ಇಂದಿನ ದರ ಪಟ್ಟಿ ಹೀಗಿದೆ...

Srinivasamurthy VN

ನವದೆಹಲಿ: ಎರಡು ದಿನಗಳ ಸ್ಥಿರತೆಯ ಬಳಿಕ ಗುರುವಾರ ಮತ್ತೆ ತೈಲೋತ್ಪನ್ನಗಳ ಬೆಲೆಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 30 ಪೈಸೆ ವರೆಗೂ ದರ ಏರಿಕೆಯಾಗಿದೆ.

ಸತತ 2 ದಿನಗಳ ಬಳಿಕ ಗುರುವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 25 ಪೈಸೆ ಮತ್ತು ಡೀಸೆಲ್ 30 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ  6ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. 

ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ 93.74 ರೂ. ಮತ್ತು ಡೀಸೆಲ್ 84.67 ರೂ. ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ 93.78 ರೂ., ಡೀಸೆಲ್ 87.51 ರೂ. ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 99.98 ರೂ., ಡೀಸೆಲ್ 91.93 ರೂ. ಗೆ ಏರಿಕೆಯಾಗಿದೆ.  ಚೆನ್ನೈನಲ್ಲಿ ಪೆಟ್ರೋಲ್ ದರ 95.33 ರೂ. ಮತ್ತು ಡೀಸೆಲ್ 89.44 ರೂ ಗೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 96.86 ರೂ- ಡೀಸೆಲ್ 89.75 ರೂ. ಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ 97.43 ರೂ ಮತ್ತು ಡೀಸೆಲ್ 92.30 ರೂ. ಗೆ ಏರಿಕೆಯಾಗಿದೆ.

SCROLL FOR NEXT