ವಾಣಿಜ್ಯ

ನಾಲ್ಕು ದಶಕಗಳ ಬಳಿಕ ಭಾರತದ ಜಿಡಿಪಿ ದಾರುಣ ಕುಸಿತ: 2022-21ರಲ್ಲಿ ಜಿಡಿಪಿ 7.3ಕ್ಕೆ ಇಳಿಕೆ

Vishwanath S

ನವದೆಹಲಿ: 2021ರ ಮೊದಲ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದ್ದರೂ 2020-21ರ ಆರ್ಥಿಕ ವರ್ಷದಲ್ಲಿ ದಾಖಲೆಯ ಶೇ. 7.3ರಷ್ಟು ಕುಸಿತ ಕಂಡಿದೆ. 

2019-20ರಲ್ಲಿ ಜಿಡಿಪಿ ಕೇವಲ ಶೇ. 4ರಷ್ಟು ಬೆಳವಣಿಗೆ ಮಾತ್ರ ಕಂಡಿತ್ತು. ಇನ್ನು ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ಬೆಳವಣಿಗೆಯಾಗಿತ್ತು. ಆನಂತರ ಜಗತ್ತಿನಲ್ಲಿ ಕೊರೋನಾದಿಂದಾಗಿ ಲಾಕ್ ಡೌನ್ ಘೋಷಿಸಲಾಗಿತ್ತು. ಹೀಗಾಗಿ ಜಿಡಿಪಿ ದರ ಋಣಾತ್ಮಕತೆ ಕಡೆಗೆ ಸಾಗಿತ್ತು. 

ಕಳೆದ ವರ್ಷ ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಮೊದಲೇ ಮಂದಗತಿಯನ್ನು ಎದುರಿಸುತ್ತಿದ್ದ ಆರ್ಥಿಕತೆಯು ಏಪ್ರಿಲ್ 2020ರಿಂದ ಮಾರ್ಚ್ 2021ರ ಹಣಕಾಸು ಅವಧಿಯಲ್ಲಿ ಶೇಕಡಾ 7.3 ರಷ್ಟು ಕುಸಿತ ಕಂಡಿದೆ. 

1979-80ರಲ್ಲಿ ಶೇ. 5.2ರಷ್ಟು ಕಂಡಿದ್ದು ಇದಾದ ನಾಲ್ಕು ವರ್ಷಗಳ ನಂತರ ಭಾರತೀಯ ಆರ್ಥಿಕತೆಯಲ್ಲಿ ಇದು ಮೊದಲ ಪೂರ್ಣ ವರ್ಷದ ಕುಸಿತ ದಾಖಲಿಸಿದೆ.

ಕೇಂದ್ರ ಸಾಂಖ್ಯಿಕ ಇಲಾಖೆ(ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಭಾರತದ ನೈಜ ಜಿಡಿಪಿ 2020ರ ಮಾರ್ಚ್ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂ.ಗಳಿಂದ 2020-21ರ ಮಾರ್ಚ್ ಅಂತ್ಯಕ್ಕೆ 135 ಲಕ್ಷ ಕೋಟಿ ರೂ.ಗೆ ಕುಸಿತ ಕಂಡಿದೆ. ಇನ್ನು 145 ಲಕ್ಷ ಕೋಟಿ ರೂ.ಗಳ ಗಾತ್ರವನ್ನು ಮರಳಿ ಪಡೆಯಲು, ಪ್ರಸಕ್ತ 2021-22ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ 10-11ರಷ್ಟು ಏರಿಕೆಯಾಗಬೇಕಿದೆ.

SCROLL FOR NEXT