ಅಮಿತಾಬ್ ಬಚ್ಚನ್ 
ವಾಣಿಜ್ಯ

ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್

ಪಾನ್ ಮಸಾಲ ಬ್ರಾಂಡ್ ನ ಜಾಹೀರಾತಿನಿಂದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಿಂದೆ ಸರಿದಿದ್ದಾರೆ. ಜಾಹೀರಾತಿಗೆ ಪಡೆದಿದ್ದ ಹಣವನ್ನು ಕೂಡ ಹಿಂತಿರುಗಿಸಿದ್ದಾಗಿ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.

ಮುಂಬೈ: ಪಾನ್ ಮಸಾಲ ಬ್ರಾಂಡ್ ನ ಜಾಹೀರಾತಿನಿಂದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಿಂದೆ ಸರಿದಿದ್ದಾರೆ. ಜಾಹೀರಾತಿಗೆ ಪಡೆದಿದ್ದ ಹಣವನ್ನು ಕೂಡ ಹಿಂತಿರುಗಿಸಿದ್ದಾಗಿ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.

ಪಾನ್ ಮಸಾಲಾ ಬ್ರಾಂಡ್ ನ ಜಾಹೀರಾತಿನಲ್ಲಿ 79 ವರ್ಷದ ಹಿರಿಯ ನಟ ಅಮಿತಾಬ್ ಬಚ್ಚನ್ ಕಾಣಿಸಿಕೊಂಡದ್ದಕ್ಕೆ ತೀವ್ರ ಟೀಕೆಯನ್ನು ಎದುರಿಸಿದ್ದರು. ಹಿರಿಯ ನಟ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅದನ್ನು ಬಳಸಿ ಎಂದು ಜನರಿಗೆ ಹೇಳುವುದನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ನಟ ಈ ತೀರ್ಮಾನ ಕೈಗೊಂಡಿದ್ದಾರೆ.

ಈ ಕುರಿತಂತೆ ಅಮಿತಾಬ್ ಬಚ್ಚನ್ ಅವರ ಕಚೇರಿ ಬ್ಲಾಗ್ ಪೋಸ್ಟ್ ಮಾಡಿದ್ದು, ಪಾನ್ ಮಸಾಲಾ ಜಾಹೀರಾತಿನ ಪ್ರಚಾರದಲ್ಲಿ ಇನ್ನು ಮುಂದೆ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾನ್ ಮಸಾಲಾ ಜಾಹೀರಾತು ಪ್ರಸಾರವಾಗಲು ಆರಂಭವಾದ ಕೆಲವೇ ದಿನಗಳಲ್ಲಿ ಟೀಕೆ ಕೇಳಿಬಂದ ನಂತರ ನಟ ಬ್ರಾಂಡ್ ನ ಕಂಪೆನಿ ಮುಖ್ಯಸ್ಥರನ್ನು ಸಂಪರ್ಕಿಸಿ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಪಾನ್ ಮಸಾಲಾ ಬ್ರಾಂಡ್ ನ ಗುತ್ತಿಗೆಯನ್ನು ರದ್ದುಗೊಳಿಸಿರುವ ಅಮಿತಾಬ್ ಬಚ್ಚನ್ ತಮ್ಮ ರದ್ದಿನ ಬಗ್ಗೆ ಕಂಪೆನಿಗೆ ಬರೆದಿದ್ದು ಮಾತ್ರವಲ್ಲದೆ ಜಾಹೀರಾತಿಗೆ ಪಡೆದಿದ್ದ ಹಣವನ್ನು ಕೂಡ ಹಿಂತಿರುಗಿಸಿದ್ದಾರೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ಬರೆಯಲಾಗಿದೆ. 
ಪಾನ್ ಮಸಾಲಾ ಬ್ರಾಂಡ್ ನ ಜಾಹೀರಾತಿನಲ್ಲಿ ಭಾಗಿಯಾಗದಂತೆ ಕಳೆದ ತಿಂಗಳು ರಾಷ್ಟ್ರೀಯ ತಂಬಾಕು ನಿಷೇಧ ಸಂಘಟನೆ(ನೋಟ್) ಬಚ್ಚನ್ ಅವರಿಗೆ ಮನವಿ ಮಾಡಿಕೊಂಡಿತ್ತು. ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದು ಹಿರಿಯ ನಟ ತಂಬಾಕು ಸೇವನೆ ವಿರೋಧಿ ಜಾಗೃತಿ, ಚಳವಳಿಗಳಲ್ಲಿ ಭಾಗಿಯಾಗಬೇಕೆಂದು ನೋಟ್ ಅಧ್ಯಕ್ಷ ಡಾ ಶೇಖರ್ ಸಲ್ಕರ್ ಬಹಿರಂಗ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel