ಐಎಂಎಫ್ 
ವಾಣಿಜ್ಯ

ಕೋವಿಡ್-19 ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ, ಗಮನಾರ್ಹ: ಐಎಂಎಫ್

ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ವಾಷಿಂಗ್ ಟನ್: ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಾರತ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಾರ್ಮಿಕ ಸುಧಾರಣೆಗಳನ್ನು ಹಾಗೂ ಖಾಸಗೀಕರಣವನ್ನು ಜಾರಿಗೆ ತಂದಿದೆ ಎಂಬುದನ್ನು ಐಎಂಎಫ್ ಉಲ್ಲೇಖಿಸಿದೆ.

ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಐಎಂಎಫ್ ಈ ವರದಿಯನ್ನು ಪ್ರಕಟಿಸಿದ್ದು, ಎಚ್ಚರಿಕೆಯನ್ನೂ ನೀಡಿದೆ. "ಸಾಂಕ್ರಾಮಿಕ ಸಂಬಂಧಿತ ಅಸ್ಥಿರತೆಗಳಿಂದ ಆರ್ಥಿಕ ಮುನ್ನೋಟದ ಮೇಲೆ ಕಾರ್ಮೋಡ ಮುಂದುವರೆದಿದ್ದು ಏರಿಳಿತದ ರಿಸ್ಕ್ ಇದ್ದೇ ಇದೆ ಎಂದು ಹೇಳಿದೆ.

ಹೂಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಚಾಲನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೋವಿಡ್-19 ನ ನಕಾರಾತ್ಮಕ ಪರಿಣಾಮಗಳು ಆರ್ಥಿಕ ಚೇತರಿಕೆಯನ್ನು ಇನ್ನೂ ಮುಂದೂಡುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಭಾರತ ಸರ್ಕಾರದ ಕೋವಿಡ್-19 ನಿರ್ವಹಣೆಯ ಬಗ್ಗೆ ಮಾತನಾಡಿರುವ ಐಎಂಎಫ್, ಸರ್ಕಾರದ ತ್ವರಿತ-ಗಮನಾರ್ಹ ಪ್ರತಿಕ್ರಿಯೆಗಳು ಆರ್ಥಿಕ ಬೆಂಬಲ, ದುರ್ಬಲ ವರ್ಗಗಳಿಗೆ ಹೆಚ್ಚಿನ ಬೆಂಬಲ ನೀಡಿರುವುದು,  ವಿತ್ತೀಯ ನೀತಿ ಸರಳೀಕರಣ, ಲಿಕ್ವಿಡಿಟಿ ಪ್ರಾವಿಷನ್ ಹಾಗೂ ಹೊಂದಿಕೊಳ್ಳಬಹುದಾದಂತಹ ಆರ್ಥಿಕ ಕ್ಷೇತ್ರ ಹಾಗೂ ನಿಯಂತ್ರಕ ನೀತಿಗಳನ್ನು ಐಎಂಎಫ್ ಶ್ಲಾಘಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ 2021-22 ನೇ ಆರ್ಥಿಕ ವರ್ಷದಲ್ಲಿ ಶೇ.9.5 ರಷ್ಟಿರಲಿದೆ. ಹಾಗೂ 2022-23 ರಲ್ಲಿ ಶೇ.8.5 ರಷ್ಟಿರಲಿದೆ ಎಂದು ಅಂದಾಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT