ಮುರುಗೇಶ ನಿರಾಣಿ 
ವಾಣಿಜ್ಯ

ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿಗಾಗಿ ಸಂಪರ್ಕ, ಮೂಲಸೌಕರ್ಯ ಸುಧಾರಣೆಯತ್ತ ಗಮನ: ನಿರಾಣಿ

ರಾಜ್ಯ ಸರ್ಕಾರ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಉದ್ಯೋಗ ಸೃಷ್ಟಿಸುವುದಕ್ಕೆ ಸಂಪರ್ಕ ಮತ್ತು ಮೂಲಸೌಕರ್ಯ ಸುಧಾರಣೆಯತ್ತ ಗಮನ ಹರಿಸುತ್ತಿದೆ.

ರಾಜ್ಯ ಸರ್ಕಾರ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಉದ್ಯೋಗ ಸೃಷ್ಟಿಸುವುದಕ್ಕೆ ಸಂಪರ್ಕ ಮತ್ತು ಮೂಲಸೌಕರ್ಯ ಸುಧಾರಣೆಯತ್ತ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೈಗಾರಿಕಾ ನಾಯಕರಿಂದ ಸಲಹೆಗಳನ್ನು ಪಡೆದಿದ್ದಾರೆ.

ಅವರೊಂದಿಗೆ ಕುಳಿತು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಹಲವು ವಿಷಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕೆ ಇದು ಸಹಕಾರಿಯಾಗಿರಲಿದೆ ಎಂದು ಮುರುಗೇಶ್ ನಿರಾಣಿ ಟಿಎನ್ ಎಸ್ಇ ಗೆ ಹೇಳಿದ್ದಾರೆ.

ಆಯ್ದ ಭಾಗ

ಬಹುತೇಕ ಹೂಡಿಕೆಗಳು ಬೆಂಗಳೂರು-ಸುತ್ತಮುತ್ತಲಿನ ಪ್ರದೇಶದ ಕೇಂದ್ರಿತವಾಗಿರುತ್ತವೆ. ಸರ್ಕಾರ ಕೈಗಾರಿಕೆಗಳನ್ನು ಬೇರೆಡೆಗೆ ಕೊಂಡೊಯ್ಯುವ ಬಗ್ಗೆ ಮಾತನಾಡುತ್ತಿರುತ್ತದೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲವಾಗಿದೆ.?

ಮೂಲಸೌಕರ್ಯ ಪ್ರಮುಖವಾದ ಅಂಶವಾಗಿರುವುದರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಸಫಲತೆ ಇನ್ನೂ ಇಲ್ಲ. ಉದಾಹರಣೆಗೆ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಇರಲಿಲ್ಲ. ನಾವು ಏನೇ ರಿಯಾಯಿತಿ ನೀಡಿದರೂ ಜನ ಅಲ್ಲಿಗೆ ಹೋಗುವುದಿಲ್ಲ. ಬೆಂಗಳೂರನ್ನು ಹೊರತುಪಡಿಸಿದರೆ ಮಂಗಳೂರಿನಲ್ಲಷ್ಟೇ ನಿರಂತರ ವಿಮಾನಸೇವೆಗಳಿವೆ. ಬೆಳಗಾವಿ ಹಾಗೂ ಹುಬ್ಬಳ್ಳಿ ಕೆಲವೇ ವಿಮಾನ ಸೇವೆಗಳನ್ನು ಹೊಂದಿದೆ ಈ ನಗರಗಳಿಂದ ಕಳೆದ 2 ವರ್ಷಗಳಲ್ಲಿ ವಿಮಾನ ಸೇವೆಯನ್ನು ಹೆಚ್ಚಿಸಲಾಗಿದೆ. ಸಂಪರ್ಕ ಹಾಗೂ ಮೂಲಸೌಕರ್ಯ ಸೂಕ್ತವಾಗಿರುವ ಪ್ರದೇಶಗಳಿಗೆ ಹೂಡಿಕೆದಾರರು ಬರುತ್ತಾರೆ. ನಾವು ಅದರತ್ತ ಗಮನ ಹರಿಸುತ್ತಿದ್ದೇವೆ. ಪ್ರತಿ 100 ಕಿ.ಮೀ ಗೆ ವಿಮಾನ ನಿಲ್ದಾಣಗಳಿರುವಂತೆ ಮಾಡುವುದು ನನ್ನ ಯೋಜನೆ.

2012 ರಲ್ಲಿ ನಾನು ಹೈ ಸ್ಪೀಡ್ ರೈಲುಗಳ ಬಗ್ಗೆಯೂ ಕೆಲಸ ಪ್ರಾರಂಭಿಸಿದ್ದೆ. ಈ ಯೋಜನೆಯ ಹಿಂದಿನ ಉದ್ದೇಶ ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು ಹಾಗೂ ಎರಡನೇ ಹಂತದಲ್ಲಿ ಹುಬ್ಬಳ್ಳಿ-ಬೆಳಾಗಾವಿಯ ನಡುವೆ ಸಂಪರ್ಕ ಸಾಧ್ಯವಾಗಿಸುವುದಾಗಿತ್ತು. ಮೂರನೇ ಹಂತದಲ್ಲಿ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವುದಾಗಿತ್ತು. ಹೈಸ್ಪೀಡ್ ರೈಲು ವ್ಯವಸ್ಥೆ ಅಧ್ಯಯನಕ್ಕಾಗಿ ಜಪಾನ್ ಗೆ ಎರಡು ಬಾರಿ ಭೇಟಿ ನೀಡಿದ್ದೆವು. ನಾವು ಈ ಯೋಜನೆ ಪ್ರಾರಂಭ ಮಾಡುವ ವೇಳೆಗೆ ಸರ್ಕಾರ ಬದಲಾಗಿತ್ತು. ನಾವು ಬಂದರು ಅಭಿವೃದ್ಧಿಯ ಬಗ್ಗೆಯೂ ಗಮನಹರಿಸುತ್ತಿದ್ದೇವೆ. ರಾಜ್ಯಾದ್ಯಂತ ಕೈಗಾರಿಕೆಗಳನ್ನು ಉತ್ತೇಜಿಸುವುದಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.

ರಾಜ್ಯಾದ್ಯಂತ ಕೈಗಾರಿಕೆಗಳನ್ನು ಉತ್ತೇಜಿಸುವುದಕ್ಕೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಗಳಲ್ಲಿ ಹಲವು ದೊಡ್ಡ ಯೋಜನೆಗಳು ಬರುತ್ತಿವೆ. ಇದಕ್ಕಾಗಿ ಎಲ್ಲಾ ರೀತಿಯ ನೆರವನ್ನೂ ನೀಡುತ್ತಿದ್ದೇವೆ.

ಕೈಗಾರಿಕಾ ಮ್ಯಾಪ್ ನಲ್ಲಿ ಕರ್ನಾಟಕವನ್ನು ನಂ.1 ಮಾಡುವುದಕ್ಕೆ ಕೈಗೊಂಡಿರುವ ಕ್ರಮಗಳೇನು?

ಉತ್ತಮ ಹವಾಮಾನ, ಕಾನೂನು ಸುವ್ಯವಸ್ಥೆ, ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಕೌಶಲ್ಯಯುಕ್ತ ಮಾನವಸಂಪನ್ಮೂಲಗಳನ್ನು ಹೂಡಿಕೆ ಆಕರ್ಷಿಸುವುದಕ್ಕೆ ಸಹಕಾರಿಯಾಗಿವೆ. ರತ್ನಗಳು ಮತ್ತು ಆಭರಣ ರಫ್ತು ವಿಭಾಗದಲ್ಲಿ ನಾವೇ ಮುಂದಿದ್ದೇವೆ.

ಐಟಿ ವಲಯವು ರಫ್ತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಏರೋಸ್ಪೇಸ್ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉದ್ಯಮ ಸರಳೀಕರಣವನ್ನು ಖಾತ್ರಿಪಡಿಸಿಕೊಳ್ಳುತ್ತೇವೆ, ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ವಿಶೇಷ ಇನ್ಸೆಂಟೀವ್ ಪ್ಯಾಕೇಜ್, ಇಂಜಿನಿಯರಿಂದ್, ಆರ್&ಡಿ ನೀತಿ, ಅಪ್ಡೇಟ್ ಆಗಿರುವ ಎಲೆಕ್ಟ್ರಿಕ್ ವಾಹನ ನೀತಿಗಳಿವೆ.

ಶೀಘ್ರವೇ ಅಪ್ಡೇಟೆಡ್ ಏರೋಸ್ಪೇಸ್ ಹಾಗೂ ಡಿಫೆನ್ಸ್ ನೀತಿ ಹಾಗೂ ಡೇಟಾ ಸೆಂಟರ್ ನೀತಿಗಳನ್ನು ಜಾರಿಗೊಳಿಸುತ್ತೇವೆ. ನಾವು ಪ್ರಾಡಕ್ಟ್-ಸ್ಪೆಸಿಫಿಕ್ ಇಂಡಸ್ಟ್ರಿಯಲ್ ಕ್ಲಸ್ಟರ್ ಯೋಜನೆಯಡಿ 11 ಕೈಗಾರಿಕಾ ಕ್ಲಸ್ಟರ್ ಗಳನ್ನು ಗುರುತಿಸಿದ್ದೇವೆ ಹಾಗೂ 9 ವರ್ಷಗಳಲ್ಲಿ 9 ಲಕ್ಷ ಉದ್ಯೋಗಗಳ ಸೃಷ್ಟಿಯ ವಿಶ್ವಾಸವಿದೆ.

ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್, ಕೊಪ್ಪಳದಲ್ಲಿ ಆಟಿಕೆ, ಬೊಂಬೆಗಳ ಕ್ಲಸ್ಟರ್, ಬೃಹತ್ ಔಷಧ ಪಾರ್ಕ್ ಯಾದಗಿರಿಯಲ್ಲಿ, ರಾಮನಗರದಲ್ಲಿ ಇವಿ ಕ್ಲಸ್ಟರ್ ಗಳನ್ನು ಗುರುತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT