ಸಂಗ್ರಹ ಚಿತ್ರ 
ವಾಣಿಜ್ಯ

2022 ದ್ವಿತಿಯಾರ್ಧದಲ್ಲಿ ಸರ್ಕಾರ 5.03 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ: ಹಣಕಾಸು ಸಚಿವಾಲಯ

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಕೇಂದ್ರ ಸರ್ಕಾರ 5.03 ಲಕ್ಷ ಕೋಟಿ ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಕೇಂದ್ರ ಸರ್ಕಾರ 5.03 ಲಕ್ಷ ಕೋಟಿ ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಾಲವನ್ನು 21 ವಾರಕ್ಕೊಮ್ಮೆ 24,000-23,000 ಕೋಟಿ  ರೂ.ಗಳಲ್ಲಿ ಪಡೆಯುವ ಸಾಧ್ಯತೆಯಿದೆ. ಇದು 2, 5, 10, 14, 30 ಮತ್ತು 40 ವರ್ಷದ ಭದ್ರತೆಗಳು ಮತ್ತು ಫ್ಲೋಟಿಂಗ್ ದರ ಬಾಂಡ್‌ಗಳ ಆಧಾರದ ಮೇಲಿನ ವ್ಯವಹಾರವಾಗಲಿದೆ. 

(7-8 ಮತ್ತು 13 ವರ್ಷಗಳ ಅವಧಿ) ಕೇಂದ್ರ ಬಜೆಟ್‌ನಲ್ಲಿ 2021-22ರ ಆರ್ಥಿಕ ವರ್ಷಕ್ಕೆ ಅಂದಾಜಿಸಲಾದ 12.05 ಲಕ್ಷ ಕೋಟಿ ರೂ.ಗಳ ಒಟ್ಟು ಮಾರುಕಟ್ಟೆ ಸಾಲದ ಪೈಕಿ, ಮೊದಲಾರ್ಧದಲ್ಲಿ (H1) 7.24 ಲಕ್ಷ ಕೋಟಿ ರೂ. (60 %) ಸಾಲವನ್ನು ಪಡೆಯಲು ಯೋಜಿಸಲಾಗಿದೆ.

2021-22ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಕಾರಣದಿಂದ ರಾಜ್ಯಗಳಿಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವ ಅವಶ್ಯಕತೆಗಳನ್ನು ಸಹ ಒಳಗೊಂಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್