ವಾಣಿಜ್ಯ

ಅಚ್ಚರಿಯಾದರೂ ನಿಜ, ವರ್ಷದ ಮೊದಲಾರ್ಧದಲ್ಲಿ ಕುಸಿದ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ!

Srinivas Rao BV

ನವದೆಹಲಿ: ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೊದಲಾರ್ಧದಲ್ಲಿ ಶೇ.1 ರಷ್ಟು ಕುಸಿತ ಕಂಡಿದೆ. 

ಗ್ರಾಹಕರ ಬೇಡಿಕೆಯ ಕುಸಿದ ಹಿನ್ನೆಲೆಯಲ್ಲಿ 2022 ನೇ ವರ್ಷದ ಮೊದಲಾರ್ಧದಲ್ಲಿ ಟಾಪ್ ಸೆಲ್ಲಿಂಗ್ ಬ್ರಾಂಡ್ ಗಳಾದ ಷಿಯೋಮಿ ಜೂನ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಶೇ.28 ರಷ್ಟು ಕುಸಿತ ಕಂಡಿದೆ.

ಅಂತಾರಾಷ್ಟ್ರೀಯ ಡೇಟಾ ಕಾರ್ಪೊರೇಷನ್ (ಐಡಿಸಿ)ಯ ಪ್ರಕಾರ, ಈ ವರ್ಷ ಜೂನ್ ನಿಂದ ಜನವರಿವರೆಗೆ 71 ಮಿಲಿಯನ್ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದೆ. 100 ಡಾಲರ್ ಗಿಂತಲೂ ಕಡಿಮೆ ಸೆಗ್ಮೆಂಟ್ ನಲ್ಲಿ ಅತಿ ಹೆಚ್ಚು ಕುಸಿತ ದಾಖಲಾಗಿದ್ದು ಮಾರುಕಟ್ಟೆ ಶೇ.5 ರಷ್ಟು ಕುಸಿತ ಕಂಡಿದೆ. 

ಸಾಮಾನ್ಯವಾಗಿ ಮೊದಲಾರ್ಧಕ್ಕಿಂತ, ದ್ವಿತೀಯಾರ್ಧದಲ್ಲಿ (ಏಪ್ರಿಲ್-ಜೂನ್) ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಹಾಗೂ ಈ ಅವಧಿಯಲ್ಲಿಯೂ ಮಾರುಕಟ್ಟೆ ಶೇ.5 ರಷ್ಟು ಕುಸಿತ ಕಂಡಿದೆ.

SCROLL FOR NEXT