ವಾಣಿಜ್ಯ

3 ತಿಂಗಳಲ್ಲಿ 10 ಸಾವಿರ ನೌಕರರ ಕಿತ್ತೊಗೆದ ಚೀನಾ ಮೂಲದ ಅಲಿಬಾಬಾ ಸಂಸ್ಥೆ!

Srinivasamurthy VN

ಬೀಜಿಂಗ್: ಚೀನಾ ಮೂಲದ ಇ-ಕಾಮರ್ಸ್ ದೈತ್ಯ ಅಲಿಬಾಬಾ ಸಂಸ್ಥೆ ಕಳೆದ ಕೇವಲ 3 ತಿಂಗಳ ಅವಧಿಯಲ್ಲಿ ಬರೊಬ್ಬರಿ 10 ಸಾವಿರ ನೌಕರರನ್ನು ಕೆಲಸದಿಂದ ವಜಾ ಮಾಡಿದೆ ಎನ್ನಲಾಗಿದೆ.

ಹೌದು.. ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಮೂರು ತಿಂಗಳಲ್ಲಿ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಜೂನ್‌ನಲ್ಲಿ ಅಲಿಬಾಬಾ ನಿವ್ವಳ ಆದಾಯದಲ್ಲಿ ಶೇಕಡಾ 50 ರಷ್ಟು ಕುಸಿತವನ್ನು ವರದಿ ಮಾಡಿದ ನಂತರ ಈ ವಜಾ ಪ್ರಕ್ರಿಯೆಗಳು ನಡೆದಿವೆ ಎನ್ನಲಾಗಿದೆ.

ದೇಶದಲ್ಲಿ ನಿಧಾನಗತಿಯ ಮಾರಾಟ ಮತ್ತು ನಿಧಾನಗತಿಯ ಆರ್ಥಿಕತೆಯ ಹಿನ್ನಲೆಯಲ್ಲಿ ಅಲಿಬಾಬಾ ಸಂಸ್ಥೆ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನವಾಗಿ ಈ ವಜಾ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.

ಇ-ಕಾಮರ್ಸ್ ಸಂಸ್ಥೆಯು ಜೂನ್ ತ್ರೈಮಾಸಿಕದಲ್ಲಿ 9,241 ಉದ್ಯೋಗಿಗಳನ್ನು ಕೈಬಿಟ್ಟಿತ್ತು. ವರದಿಗಳ ಪ್ರಕಾರ, ಕಂಪನಿಯು ತನ್ನ ಒಟ್ಟಾರೆ ಹೆಡ್‌ಕೌಂಟ್ (ಒಟ್ಟಾರೆ ನೌಕರರ ಸಂಖ್ಯೆ) ಅನ್ನು ಸುಮಾರು 2,45,700ಕ್ಕೆ ಇಳಿಕೆ ಮಾಡಿದೆ.

ಕಂಪನಿಯು ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ ಶೇಕಡಾ 50 ರಷ್ಟು ಕುಸಿತವನ್ನು ಅಂದರೆ 22.74 ಶತಕೋಟಿ ಯುವಾನ್ (USD 3.4 ಶತಕೋಟಿ) ಗೆ ವರದಿ ಮಾಡಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 45.14 ಶತಕೋಟಿ ಯುವಾನ್‌ನಿಂದ ಕಡಿಮೆಯಾಗಿತ್ತು. 

ಅಲಿಬಾಬಾವನ್ನು 1999ರಲ್ಲಿ ಸ್ಥಾಪಿಸಲಾಯಿತು. ಮಾ 2015 ರಲ್ಲಿ ಡೇನಿಯಲ್ ಜಾಂಗ್‌ಗೆ ಸಿಇಒ ಆಗಿ ಬ್ಯಾಟನ್ ಅನ್ನು ರವಾನಿಸಿದಾಗ ಮತ್ತು 2019 ರಲ್ಲಿ ಅವರನ್ನು ಅಧ್ಯಕ್ಷರಾಗಿ ನೇಮಿಸಿದಾಗ ಕಂಪನಿಯು ಪ್ರಮುಖ ಪುನರ್ರಚನೆಯಾಗಿತ್ತು.
 

SCROLL FOR NEXT