ಟಿಕ್ ಟಾಕ್ ಸಾಂದರ್ಭಿಕ ಚಿತ್ರ 
ವಾಣಿಜ್ಯ

ಐದು ವಿಧಾನಗಳಲ್ಲಿ ಯುಎಸ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಕಾಣುತ್ತಿದೆ ಟಿಕ್ ಟಾಕ್!

ಬೀಜಿಂಗ್ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಅತ್ಯಂತ ಜನಪ್ರಿಯ ವೀಡಿಯೊ ಶೇರಿಂಗ್ ಆ್ಯಪ್ ಟಿಕ್ ಟಾನ್ ನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅನೇಕ ಮಂದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ನೋಡುತ್ತಿದ್ದಾರೆ. 

ವಾಷಿಂಗ್ಟನ್: ಬೀಜಿಂಗ್ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಅತ್ಯಂತ ಜನಪ್ರಿಯ ವೀಡಿಯೊ ಶೇರಿಂಗ್ ಆ್ಯಪ್ ಟಿಕ್ ಟಾನ್ ನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅನೇಕ ಮಂದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ನೋಡುತ್ತಿದ್ದಾರೆ. 
ಆ ಐದು ವಿಧಾನಗಳು ಇಂತಿವೆ: 

ಡೇಟಾ ಹಂಚಿಕೆ: ಪ್ರತಿಸ್ಪರ್ಧಿಯಾದ ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್ ಮತ್ತು ಯು ಟ್ಯೂಬ್ ನಂತೆ ಟಿಕ್ ಟಾಕ್ ನಲ್ಲಿಯೂ ಡೇಟಾ ಶೇರ್ ಮಾಡಲಾಗುತ್ತದೆ. ಈ ಆ್ಯಪ್ ನಲ್ಲಿ ಎಷ್ಟು ಯುವ ಬಳಕೆದಾರರು ಡೇಟಾ ಶೇರ್ ಮಾಡಿಕೊಳ್ಳಲು ಸಿದ್ಧರಿದ್ದಾರೆ ಎಂಬುದಕ್ಕೆ ಯಾವುದೇ ಮಿತಿಯಿಲ್ಲ ಎಂದು ತೋರುತ್ತದೆ. ಈ ಎಲ್ಲಾ ಮಾಹಿತಿಯನ್ನು  ಕಮ್ಯುನಿಸ್ಟ್ ಪಕ್ಷ ಆಳ್ವಿಕೆ ನಡೆಸುತ್ತಿರುವ ಚೀನಾದ ಕಂಪನಿಯಿಂದ ಪ್ರಕ್ರಿಯೆಗೊಳಿಸುತ್ತಿದೆ ಎಂದು ಟೀಕ್ ಟಾಕ್ ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆದರಿಕೆ ಮಿತಿ ಮೀರಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ.  ಟಿಕ್ ಟಾಕ್ ನಲ್ಲಿ ಯುಎಸ್ ಕಂಪನಿಯೇ ಆಗಿರಲಿ ಅಥವಾ ಬೇರೆ ಯಾವುದೇ ವಿದೇಶಿ ಕಂಪನಿಯಾಗಿರಿ ಎಲ್ಲಾ ಸಮಯದಲ್ಲೂ ಟನ್ ಗಳಷ್ಟು ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂದು ಡ್ಯೂಕ್ ವಿವಿಯ ಸ್ಯಾನ್ ಪೋರ್ಡ್ ಸ್ಕೂಲ್ ನ ಪಬ್ಲಿಕ್ ಪಾಲಿಸಿ ಸಿನಿಯರ್ ಪೆಲೋ ಜಸ್ಟಿನ್ ಶೆರ್ಮನ್ ಹೇಳಿದರು. ಆದರೆ ಪ್ರಾಜೆಕ್ಟ್ ಟೆಕ್ಸಾಸ್" ಎಂದು ಕರೆಯಲ್ಪಡುವ ಯೋಜನೆಯಲ್ಲಿ ಕೇವಲ ಸರ್ವರ್ ಗಳಿಗಾಗಿ ಅಮೆರಿಕನ್ ಬಳಕೆದಾರರ ಡೇಟಾವನ್ನು ಮಾತ್ರ ಸಂಪೂರ್ಣವಾಗಿ ಕಳುಹಿಸಲಾಗುತ್ತಿದೆ ಎಂದು ಟಿಕ್‌ಟಾಕ್ ಹೇಳುತ್ತದೆ.

ಬೇಹುಗಾರಿಕೆ: ಎಲ್ಲಾ ಆ್ಯಪ್ ಗಳಂತೆ ಟಿಕ್ ಟಾಕ್ ನಲ್ಲೂ  ಬಳಕೆದಾರರ ಸಂಪೂರ್ಣ ಫೋನ್ ಮಾಹಿತಿ ತೆರೆಯುತ್ತದೆಯ. ಫೋನ್ ನಲ್ಲಿ ನೀವು ಯಾವಾಗಬೇಕಾದರೂ  ಆ್ಯಪ್ ಹೊಂದಿರುತ್ತೀರಾ. ಬಳಕೆದಾರರ ಅರಿವಿಲ್ಲದಂತೆ ಕ್ಯಾಮರಾ  ಅಥವಾ ಮೈಕ್ರೋ ಪೋನ್ ನ್ನು ಟಿಕ್ ಟಾಕ್ ನಲ್ಲಿ ಗುಟ್ಟಾಗಿ ಆನ್ ಮಾಡಬಹುದು ಎಂದು  ಸೈಬರ್ ಥ್ರೇಟ್ ಅಲೈಯನ್ಸ್ ಸಿಇಒ ಮೈಕೆಲ್ ಡೇನಿಯಲ್ ಹೇಳಿದರು. ವಿಶ್ವದಾದ್ಯಂತ ಪ್ರತಿಪಕ್ಷ ಮತ್ತು ಟೀಕೆಕಾರರ ಮೇಲೆ ನಿಗಾ ವಹಿಸಲು ಇಸ್ರೇಲಿ ತಂತ್ರಜ್ಞಾನ ಸಂಸ್ಥೆಯಿಂದ ರಚಿಸಲಾದ ಪೆಗಾಸಸ್ ಸಾಪ್ಟ್ ವೇರ್ ಟಿಕ್ ಟಾಕ್ ನಲ್ಲಿಯೂ ಇರಬಹುದು. ನಮ್ಮ ಫೋನ್ ನಲ್ಲಿಯೂ ಚೈನಾ ಆವೃತ್ತಿಯ ಪೆಗಾಸಸ್ ಅಳವಡಿಸಲಾಗಿದೆ. ಇದು ಅಮೆರಿಕ ಸರ್ಕಾರಕ್ಕೆ ಭೀತಿಯೊಡ್ಡಬಹುದು ಎಂದು ಅನಿಸುತ್ತದೆ ಎಂದು ಕ್ಯಾಟೊ ನೆಟ್‌ವರ್ಕ್ಸ್‌ನ ಭದ್ರತಾ ಕಾರ್ಯತಂತ್ರದ ಹಿರಿಯ ನಿರ್ದೇಶಕ ಎಟೇ ಮಾರ್  ತಿಳಿಸಿದರು.

ಸೆನ್ಸಾರ್: ಟಿಕ್‌ಟಾಕ್‌ನಲ್ಲಿ ಕಮ್ಯೂನಿಸ್ಟ್ ಪಕ್ಷದ ಆದ್ಯತೆಗಳನ್ನು ರಕ್ಷಿಸಲು ವಿಷಯವನ್ನು ಸೆನ್ಸಾರ್ ಮಾಡುವ ಚೀನಾ ಸರ್ಕಾರದ ಸಾಮರ್ಥ್ಯ ಸೈಬರ್‌ ಸೆಕ್ಯುರಿಟಿ ತಜ್ಞರು ಪ್ರಸ್ತಾಪಿಸಿರುವ ಮತ್ತೊಂದು ಸಂಭಾವ್ಯ ಬೆದರಿಕೆಯಾಗಿದೆ. ಚೀನಾದ ಹೊರಗಡೆ ನೀವು ಟಿಬೆಟ್ ಅಥವಾ ತೈವಾನ್ ಅನ್ನು ಬೆಂಬಲಿಸುವ ಯಾವುದೇ ವಿಷಯವನ್ನು ಟಿಕ್ ಟಾಕ್ ತೋರಿಸುವುದಿಲ್ಲ ಎಂದು ಡೇನಿಯಲ್ ಹೇಳಿದರು. ಸರ್ಕಾರದ ಪರವಾದ ವಿಷಯಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಚೀನಾ ಟೀಕ್ ಟಾಕ್ ಸಂಸ್ಥೆಯನ್ನು ಒತ್ತಾಯಿಸುತ್ತದೆ. ಆದರೆ, ಅಲ್ಲಿರುವ ಸೆನ್ಸಾರ್‌ ಶಿಪ್ ಮಟ್ಟ ಗಮನಿಸಿದರೆ ಟಿಕ್ ಟಾಕ್ ಮೇಲೆ ಒತ್ತಡವಿರುವುದು ಕಂಡುಬರುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಚೀನಾ ಸರ್ಕಾರದ ಸೆನ್ಸಾರ್ ವಿಧಾನ ನೋಡಿದರೆ ಪತ್ರಿಕೋದ್ಯಮ ಧ್ವನಿಯನ್ನು ಅಡಗಿಸುವುದನ್ನು ನೋಡಬಹುದು ಎಂದು ಶೆರ್ಮನ್ ಹೇಳಿದರು. 

ತಪ್ಪು ಮಾಹಿತಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನಾ 2016 ರಲ್ಲಿ ರಷ್ಯಾ ನಡೆಸಿದ ಆನ್‌ಲೈನ್ ಪ್ರಚಾರಗಳ ಪ್ರತಿಕ್ರಿಯೆ ಸಂದರ್ಭದಲ್ಲಿ ಯುಎಸ್ ಗೆ ಅಡ್ಡಿಪಡಿಸಿದಂತೆ ಚೀನಾ ಸರ್ಕಾರ ಟಿಕ್‌ಟಾಕ್ ನ್ನು  ಸಾಧನವಾಗಿ ಬಳಸಬಹುದು ಎಂಬ ಮತ್ತೊಂದು ಭಯವಿದೆ. ಕಳೆದ ತಿಂಗಳು ನಡೆದ ಮಧ್ಯಂತರ ಚುನಾವಣೆ ಸಂದರ್ಭದಲ್ಲಿ ತಪ್ಪು ಮಾಹಿತಿ ಹರಡುವಿಕೆ ತಪ್ಪಿಸುವಲ್ಲಿ ಟಿಕ್ ಟಾಕ್ ವಿಫಲವಾಗಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಕ್ ಟಾಕ್, ಚುನಾವಣಾ ವಿಷಯಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಪರಿಚಯಿಸಲಾಗಿದ್ದು, ಸರ್ಕಾರ ಮತ್ತು ರಾಜಕಾರಣಿಗಳ ಖಾತೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದೆ. 

ಸುಮ್ಮನೆ... ಚೀನಾ? ಚೀನಾದ ಆಶೋತ್ತರಗಳಿಗೆ ತಕ್ಕಂತೆ ಟಿಕ್ ಟಾಕ್ ಮಾಡಿದರೆ, ಜನವರಿಯಲ್ಲಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್  ಮರು ತೆಗೆದುಕೊಳ್ಳಬಹುದೇ ಎಂದು ಕೆಲವು ತಜ್ಞರು ಕುತೂಹಲ ವ್ಯಕ್ತಪಡಿಸಿದ್ದಾರೆ. ಏಕೆಂದರೆ  ಟಿಕ್ ಟಾಕ್ ಟೀಕಿಸುವವರಲ್ಲಿ ರಿಪಬ್ಲಿಕ್ ಪಾರ್ಟಿ ಸದಸ್ಯರೇ ಹೆಚ್ಚು. ಅಮೆರಿಕದಲ್ಲಿ ಚೀನಾ ಮಾಲೀಕತ್ವದ ಆ್ಯಪ್ ಕಾರ್ಯನಿರ್ವಹಣೆಗೆ ಧೀರ್ಘಾ ವಧಿಯ ಸುರಕ್ಷತಾ ವ್ಯವಸ್ಥೆಗೆ ಡೆಮಾಕ್ರಟಿಕ್ ಪಕ್ಷದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತುಕತೆ ನಡೆಸುವಂತೆ ರಿಪಬ್ಲಿಕ್ ಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT