ಸಾಂದರ್ಭಿಕ ಚಿತ್ರಗಳು 
ವಾಣಿಜ್ಯ

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ: ಸುಕನ್ಯಾ ಸಮೃದ್ಧಿ, ಪಿಪಿಎಫ್ ದರಗಳಲ್ಲಿ ಯಥಾಸ್ಥಿತಿ

ಹಿರಿಯ ನಾಗರಿಕರು, ಸಾಮಾನ್ಯ ಹೂಡಿಕೆದಾರರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ) ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿದರಗಳನ್ನು ಕೇಂದ್ರಸರ್ಕಾರ ಹೆಚ್ಚಿಸಿದೆ.

ನವದೆಹಲಿ: ಹಿರಿಯ ನಾಗರಿಕರು, ಸಾಮಾನ್ಯ ಹೂಡಿಕೆದಾರರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ) ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿದರಗಳನ್ನು ಕೇಂದ್ರಸರ್ಕಾರ ಹೆಚ್ಚಿಸಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ,  ಆದಾಯವು ತೆರಿಗೆಗೆ ಅರ್ಹವಾಗಿರುವ ಶೇ 5ರವರೆಗಿನ ಠೇವಣಿಗಳು ಹಾಗೂ  ಎನ್‌ಎಸ್‌ಸಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕೆವಿಪಿ ದರಗಳನ್ನು ಶೇಕಡಾ 1.1 ರಷ್ಟು ಹೆಚ್ಚಿಸಲಾಗಿದೆ. ಬದಲಾದ ಬಡ್ಡಿ ದರಗಳು ಜನವರಿ 1, 2023 ಮತ್ತು ಮಾರ್ಚ್ 31, 2023 ರ ನಡುವೆ ಅನ್ವಯಿಸುತ್ತವೆ. ಆದಾಗ್ಯೂ, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರಗಳನ್ನು ಕ್ರಮವಾಗಿ ಶೇ.  7.1   ಮತ್ತು 7.6 ರಷ್ಟಿದೆ. 

ಇದು  ಆಯ್ದು ಯೋಜನೆಗಳಿಗೆ ಬಡ್ಡಿ ದರಗಳನ್ನು ಹೆಚ್ಚಿಸಿದ ಎರಡನೇ ತ್ರೈಮಾಸಿಕವಾಗಿದೆ.  ಅಕ್ಟೋಬರ್ ಮುನ್ನ ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಈ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸಾಮಾನ್ಯವಾಗಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.

ಇತ್ತೀಚಿಗೆ ಮಾಡಲಾದ ಪರಿಷ್ಕರಣೆ ಪ್ರಕಾರ ಅಂಚೆ ಕಛೇರಿಗಳಲ್ಲಿನ ಒಂದು ವರ್ಷ ಅವಧಿಯ ಠೇವಣಿ ಮೇಲೆ ಶೇ.  6.6, ಎರಡು ವರ್ಷಗಳ ಠೇವಣಿಗೆ ಶೇ.  6.8, ಮೂರು ವರ್ಷಗಳ ಠೇವಣಿಗೆ ಶೇ. 6.9 ಬಡ್ಡಿಯಿತ್ತು.  ಆದರೆ ಐದು ವರ್ಷಗಳ ಠೇವಣಿ ಬಡ್ಡಿಯು ಶೇಕಡಾ 7 ರಷ್ಟಿತ್ತು. 

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 8 ರಷ್ಟು 40 ಬೇಸಿಸ್ ಪಾಯಿಂಟ್‌ಗಳನ್ನು ಗಳಿಸುತ್ತದೆ ಎಂದು ಅದು ಹೇಳಿದೆ. ಕಿಸಾನ್ ವಿಕಾಸ್ ಪತ್ರಗಳ ಮೇಲಿನ ಬಡ್ಡಿದವನ್ನು ಶೇ. 7. 2 ರಷ್ಟು ಹೆಚ್ಚಿಸಿದೆ. ಎನ್ ಎಸ್ ಸಿ ಬಡ್ಡಿ ದರವನ್ನು 20 ಮೂಲ ಅಂಕಗಳಿಂದ ಶೇಕಡಾ 7 ಕ್ಕೆ ಏರಿಸಲಾಗಿದೆ. ಉಳಿತಾಯ ಠೇವಣಿಗಳ ಮೇಲಿನ  ವಾರ್ಷಿಕ ಶೇ. 4 ರಷ್ಟು  ಬಡ್ಡಿ ದರ   ಮುಂದುವರೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT