ವಾಣಿಜ್ಯ

ಚಿನ್ನ ಆಮದು ಸುಂಕ ಶೇ.15 ರಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಹಳದಿ ಲೋಹದ ಆಮದು ಸುಂಕ ಏರಿಕೆಯಾಗಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದು ಜೂನ್ 30 ರಿಂದ ಜಾರಿಗೆ ಬಂದಿದೆ.

ಈ ಹಿಂದೆ ಚಿನ್ನದ ಮೇಲಿನ ಮೂಲ ಆಮದು ಸುಂಕ ಶೇ.7.5 ರಷ್ಟಿತ್ತು. ಅದು ಇದೀಗ ಶೇ. 12.5 ರಷ್ಟಾಗಲಿದೆ. ಶೇ. 2.5 ರಷ್ಟು  ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ನೊಂದಿಗೆ ಚಿನ್ನದ ಮೇಲಿನ ಆಮದು ಸುಂಕ ಶೇ. 15 ರಷ್ಟಾಗಲಿದೆ.

ಚಿನ್ನದ ಆಮದಿನಲ್ಲಿ ದಿಢೀರ್ ಏರಿಕೆಯಾಗಿದೆ. ಮೇ ತಿಂಗಳಲ್ಲಿ ಒಟ್ಟಾರೇ 107 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಜೂನ್ ತಿಂಗಳಲ್ಲಿಯೂ ಗಮನಾರ್ಹ ರೀತಿಯಲ್ಲಿ ಆಮದು ಮಾಡಿಕೊಳ್ಳಲಾಗಿತ್ತು.

ಚಿನ್ನದ ಆಮದಿನಲ್ಲಿ ಹೆಚ್ಚಳ ಪ್ರಸ್ತುತ ವಿತ್ತೀಯ ಕೊರತೆ ಮೇಲೆ ಒತ್ತಡ ಬೀರಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

SCROLL FOR NEXT