ವಾಣಿಜ್ಯ

ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 7.04ಕ್ಕೆ ಇಳಿಕೆ

Lingaraj Badiger

ನವದೆಹಲಿ: ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಏಪ್ರಿಲ್ ನಲ್ಲಿ ಶೇಕಡಾ 7.79ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.04ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಸೋಮವಾರ ಮಾಹಿತಿ ನೀಡಿವೆ.

ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ಏಪ್ರಿಲ್ ನಲ್ಲಿ ಶೇ. 7.79 ಮತ್ತು ಮೇ 2021 ರಲ್ಲಿ ಶೇಕಡಾ 6.3 ರಷ್ಟಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ 2021 ರ ಆಹಾರ ಹಣದುಬ್ಬರವು ಮೇ 2022 ರಲ್ಲಿ ಶೇಕಡಾ 7. 79ರಷ್ಟು ಇದ್ದು, ಇದು ಹಿಂದಿನ ತಿಂಗಳಲ್ಲಿ ದಾಖಲಾಗಿದ್ದ ಶೇಕಡಾ 8.31 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ನಿಯಂತ್ರಣ ಮೀರಿ ಹೋಗಿರುವ ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಆರ್ ಐಬಿಗೆ ಸೂಚಿಸಿದ ನಂತರ, ಕೇಂದ್ರ ಬ್ಯಾಂಕ್ ಇತ್ತೀಚಿಗೆ ರೆಪೊ ದರವನ್ನು ಹೆಚ್ಚಿಸಿತ್ತು. ಇದರ ಪರಿಣಾಮ ಚಿಲ್ಲರೆ ಹಣದುಬ್ಬರ ಸ್ವಲ್ಪ ಇಳಿಕೆಯಾಗಿದೆ.

SCROLL FOR NEXT