ವಾಣಿಜ್ಯ

ಜಿಎಸ್ ಟಿ ವ್ಯಾಪ್ತಿಗೆ ಇಂಧನ: "ಕೇಂದ್ರ ಸಿದ್ಧವಿದೆ ಆದರೆ..." ಪೆಟ್ರೋಲಿಯಂ ಸಚಿವ ಪುರಿ ಹೇಳೋದು ಏನು ಅಂದರೆ...

Srinivas Rao BV

ನವದೆಹಲಿ: ಪೆಟ್ರೋಲ್, ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಿದೆ ಆದರೆ ಇಂತಹ ನಿರ್ಧಾರಗಳಿಗೆ ರಾಜ್ಯಗಳು ಒಪ್ಪಿಗೆ ನೀಡುವುದು ಅನುಮಾನ ಎಂದು ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತರುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ರಾಜ್ಯಗಳ ಅನುಮೋದನೆ. ರಾಜ್ಯಗಳು ಒಪ್ಪಿದಲ್ಲಿ ನಾವೂ ಸಿದ್ಧ, ನಾವು ಹಿಂದಿನಿಂದಲೂ ಈ ನಡೆಗೆ ಸಿದ್ಧವಿದ್ದೇವೆ ಎಂದು ಪೆಟ್ರೋಲಿಯಮ್ ಸಚಿವರು ತಿಳಿಸಿದ್ದಾರೆ. 
 
ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತಂದರೆ ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬುದು ಮತ್ತೊಂದು ವಿಷಯ ಈ ಪ್ರಶ್ನೆಯನ್ನು ಹಣಕಾಸು ಸಚಿವರ ಬಳಿ ಕೇಳಬೇಕು ಎಂದು ಪುರಿ ಶ್ರೀನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಾಜ್ಯಗಳಿಗೆ ಆದಾಯದ ಮೂಲ ಇರುವುದೇ ಮದ್ಯ ಹಾಗೂ ಇಂಧನಗಳಲ್ಲಿ ಆದ್ದರಿಂದ ರಾಜ್ಯಗಳು ಒಪ್ಪುವುದು ಕಷ್ಟ ಎಂದು ಪುರಿ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT