ವಾಣಿಜ್ಯ

2047ರೊಳಗೆ ದೇಶದ ಆರ್ಥಿಕತೆ 40 ಟ್ರಿಲಿಯನ್ ಡಾಲರ್ ಆಗಲಿದೆ: ಮುಕೇಶ್ ಅಂಬಾನಿ

Nagaraja AB

ಗಾಂಧಿನಗರ: 2047ರೊಳಗೆ ದೇಶದ ಆರ್ಥಿಕತೆ 40 ಟ್ರಿಲಿಯನ್ ಡಾಲರ್ ಆಗಲಿದ್ದು, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಶ್ರೇಯಾಂಕ ಪಡೆಯಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಶುದ್ಧ ಇಂಧನ, ಜೀವಿಕ ಇಂಧನ ಮತ್ತು ಡಿಜಿಟಲ್ ಕ್ರಾಂತಿ ಮೂರು ಕಾಂತ್ರಿಕಾರಿಕ ಬದಲಾವಣೆ ಮಾಡಲಿದ್ದು, ಮುಂದಿನ ದಶಕಗಳಲ್ಲಿ ದೇಶ ಪ್ರಗತಿಯಾಗಲಿದೆ ಎಂದು ಅವರು ತಿಳಿಸಿದರು. 

ಪಂಡಿತ್ ದೀನ್ ದಯಾಳ್ ಇಂಧನ ವಿವಿಯ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯಗಳಿಸಿದ ಅಮೃತ ಮಹೋತ್ಸವದಿಂದ ಶತಮಾನೋತ್ಸವ ವೇಳೆಗೆ ಆರ್ಥಿಕವಾಗಿ ಅಭೂತಪೂರ್ವಕವಾಗಿ ಬೆಳವಣಿಗೆಯಾಗಲಿದ್ದು, ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದರು. 

ಮೂರು ಕ್ರಾಂತಿಕಾರಿಕ ರೀತಿಯಲ್ಲಿ ದೇಶದಲ್ಲಿ ಬದಲಾವಣೆ ತರಲಿವೆ. ಶುದ್ಧ ಇಂಧನ ಮತ್ತು ಜೈವಿಕ ಇಂಧನ ಕ್ರಾಂತಿಯಿಂದ ಇಂಧನ ಕ್ಷೇತ್ರದಲ್ಲಿ ಸುಸ್ಥಿರತೆಯಾದರೆ, ಡಿಜಿಟಲ್ ಕ್ರಾಂತಿಯಿಂದ ಇಂಧನವನ್ನು ದಕ್ಷತೆಯಿಂದ ಬಳಸಿಕೊಳ್ಳಬಹುದಾಗಿದೆ. ಈ ಮೂರು ಕ್ರಾಂತಿಗಳು ದೇಶ ಪ್ರಗತಿಗೆ ನೆರವಾಗಲಿದೆ. ಹವಾಮಾನ ವೈಫರೀತ್ಯದಿಂದ ಸುಂದರವಾದ ನಮ್ಮ ಭೂಮಿಯನ್ನು ರಕ್ಷಿಸಲಿವೆ ಎಂದು ಅವರು ತಿಳಿಸಿದರು. 

SCROLL FOR NEXT